ಸುರಕ್ಷತೆಗೆ ಸಿ.ಸಿ. ಕ್ಯಾಮರಾ ಅಗತ್ಯ

PSI
Published on

ಶಿರಹಟ್ಟಿ: ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಗ್ರಾಮಗಳ ಆಯಕಟ್ಟಿನ ಸ್ಥಳ ಸೇರಿದಂತೆ ಮನೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಸುರಕ್ಷತೆ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಪಿಎಸ್‌ಐ ಈರಣ್ಣ ರಿತ್ತಿ ಹೇಳಿದರು.

ಪಟ್ಟಣದ ಆಯಕಟ್ಟಿನ ಸ್ಥಳ ಹಾಗೂ ಮನೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಚರ್ಚಿಸಲು ಸ್ಥಳೀಯ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ತಾಲೂಕಿನ ಮಾಗಡಿ ಗ್ರಾಪಂ ವತಿಯಿಂದ ಗ್ರಾಮದ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಶಿರಹಟ್ಟಿ ಪಟ್ಟಣದ ಜನದಟ್ಟಣೆ ಪ್ರದೇಶವಾದ ಬಸ್ ನಿಲ್ಲಾಣ ಪಕ್ಕದ ನೆಹರು ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಕೆಲ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಅಗತ್ಯವಾಗಿದೆ. ಇದರಿಂದ ಕಳ್ಳತನ ಹಾಗೂ ಇತರೆ ಅಹಿತಕರ ಘಟನೆ ಕಂಡು ಹಿಡಿಯಲು ಅನುಕೂಲವಾಗುತ್ತದೆ ಎಂದರು.
ಸಿಸಿ ಕ್ಯಾಮರಾ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಯಾವುದೇ ರೀತಿಯ ಫಂಡ್ ವ್ಯವಸ್ಥೆ ಇರುವದಿಲ್ಲ. ಹೀಗಾಗಿ ಪಟ್ಟಣ ಪಂಚಾಯಿತಿಯು ಖರ್ಚುವೆಚ್ಚ ಭರಿಸಬೇಕು ಎಂದರು. ಅಲ್ಲದೆ, ಸುರಕ್ಷತೆ ದೃಷ್ಟಿಯಿಂದ ಪಟ್ಟಣದ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಿಸಿ ಕ್ಯಾಮರಾ ಅವಡಿಸಿದರೆ ಅಪರಾಧಿಕ ಕೃತ್ಯಗಳನ್ನು ತಡೆಯಲು ಸಹಾಯವಾಗುತ್ತದೆ ಎಂದರು.

ಸಿ.ಪಿ. ಕಾಳಗಿ, ಅಶೋಕ ಕೋಲಾರ, ಗೂಡುಸಾಬ ಬುವಾಜಿ, ಪ್ರಭು ಹಲಸೂರ, ಎಚ್.ಎಂ. ದೇವಗಿರಿ, ಫಕೀರೇಶ ಲಮಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net