

ಸಿದ್ದಾಪುರ: 2023ರ ನವೆಂಬರ್ನಲ್ಲಿ ಜರುಗಿದ ಸಿ.ಎ. ಪರೀಕ್ಷೆಯಲ್ಲಿ ತಾಲೂಕಿನ ಬಿಳಗಿಯ ಸೂಕ್ಷ್ಮ ಸುರೇಶ ಆಚಾರ್ಯ ಉತ್ತೀರ್ಣಳಾಗಿದ್ದಾಳೆ. ಸಿದ್ದಾಪುರದ ಪ್ರಶಾಂತಿ ಗುರುಕುಲ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ಮೂಡಬಿದರೆಯ ಆಳ್ವಾಸ್ ಮತ್ತು ಉಡುಪಿಯ ತ್ರಿಷಾ ಕಾಲೇಜ್ನಲ್ಲಿ ವ್ಯಾಸಂಗ ಮಾಡಿ ನಂತರ ಮಂಗಳೂರಿನ ಚಾರ್ಟಡ್ ಅಕೌಂಟೆಂಟ್ ಅವಿನಾಶ ಶಾನಭೋಗ ಮತ್ತು ಬಾಲಕೃಷ್ಣ ಶಾನಭೋಗ ಅವರಲ್ಲಿ ತರಬೇತಿ ಪಡೆದಿದ್ದಳು. ಇವಳು ಬಿಳಗಿಯ ಸುರೇಶ ರಘುನಾಥ ಆಚಾರ್ಯ ಮತ್ತು ಸುಮಾ ಸುರೇಶ ಆಚಾರ್ಯ ದಂಪತಿ ಪುತ್ರಿ.