

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ತಿಂಗಳ ಮೊದಲ ವಾರ ಬೈಂದೂರು ತಾಲೂಕಿನ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ವಿಶಿಷ್ಟ ಪ್ರವಾಸೋದ್ಯಮ ಯೋಜನೆಯೊಂದು ರೂಪು ತಳೆದಿದೆ. ಕೊಲ್ಲೂರಿಂದ ಆರಂಭವಾಗುವ ಧಾರ್ಮಿಕ ದರ್ಶನದಲ್ಲಿ ವಿವಿಧ ದೇವಸ್ಥಾನಗಳಿಗೆ ಕರೆದೊಯ್ಯಲಾಗುವುದು. ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಪರಿಚಯಿಸುವ ರಾಜ್ಯದ ಮೊದಲ ತಾಲೂಕು ಎನ್ನುವ ಹೆಗ್ಗಳಿಕೆ ಬೈಂದೂರಿಗೆ ಸಿಗಲಿದೆ. ಪ್ರವಾಸಿ ತಾಣ ಪರಿಚಯಿಸುವ ಈ ಯೋಜನೆ ಒನ್ ಡೇ ಕ್ಯಾಂಪ್ ಟೂರಿಂಗ್ ರೀತಿ ಇರಲಿದೆ. ವಿನೂತನ ಕುರಿತು ರಾಜ್ಯ ಸಾರಿಗೆ ಅಧಿಕಾರಿಗಳ ಜತೆ ಮಾತುಕತೆ ನಡೆದಿದೆ. ಮ್ಯಾಪ್, 15 ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳ ಪಟ್ಟಿ ಸಿದ್ಧವಾಗಿದ್ದು, ನಿಗಮ ಗ್ರೀನ್ ಸಿಗ್ನಲ್ ಸಿಗುವುದು ಬಾಕಿಯಿದೆ. ಎಲ್ಲ ಸರಿಯಾದರೆ ವರ್ಷದಲ್ಲಿ ಪ್ರಾರಂಭವಾಗಲಿದೆ.
ಬೆಳಗ್ಗೆ-ಸಂಜೆ ಕೊಲ್ಲೂರಲ್ಲಿ: ಕೊಲ್ಲೂರಿಗೆ ಬರುವ ಭಕ್ತರು ಬೆಳಗ್ಗೆ ಮೂಕಾಂಬಿಕೆ ತಾಯಿಗೆ ಪೂಜೆ ಸಲ್ಲಿಸಿ, ಸಂಜೆ ಪೂಜೆಗೆ ಮತ್ತೆ ಕೊಲ್ಲೂರಿಗೆ ಬಿಡುವ ಹಾಗೆ ಟೂರಿಂಗ್ ಪ್ಲಾನ್ ಅಳವಡಿಸಿಕೊಳ್ಳಲಾಗುತ್ತಿದೆ. ಕೇವಲ ಧಾರ್ಮಿಕ ಕ್ಷೇತ್ರಗಳ ವೀಕ್ಷಣೆ ಮಾಡುವವರಿಗೆ ಎಲ್ಲ ಪ್ರಸಿದ್ಧ ದೇವಸ್ಥಾನಗಳ ದರ್ಶನ ಮಾಡಿಸಿ ಹೊರಟಲ್ಲಿಗೆ ತಂದು ಬಿಡಲಾಗುತ್ತದೆ.
ಪ್ರವಾಸಿಗರಿಗೂ ಪ್ಲಾನ್: ಪ್ರವಾಸಿ ತಾಣಗಳ ವೀಕ್ಷಣೆ ಮಾಡುವುದಕ್ಕೆ ಇಚ್ಛಿಸಿದರೆ ಜಲಪಾತ, ಕರಾವಳಿ ತೀರ, ಸನ್‌ಸೆಟ್, ಚಂದ್ರೋದಯ ಹೀಗೆ ಬೈಂದೂರಿನ ಎಲ್ಲ ಪ್ರವಾಸಿ ತಾಣ ದರ್ಶನ ಮಾಡಿಸಿ ಹೊರಟಲ್ಲಿಗೆ ಬೈಂದೂರು ತಂದು ಬಿಡುವ ವ್ಯವಸ್ಥೆಯೂ ಇದೆ. ಒಟ್ಟಾರೆ ರಾಜ್ಯದ ಅಂಬರದಿಂದ ಕಾಶ್ಮೀರ ಎಂದೇ ಕರೆಯಿಸಿಕೊಳ್ಳುತ್ತಿರುವ ಬೈಂದೂರು ಪ್ರವಾಸಿತಾಣಗಳ ವೀಕ್ಷಣೆ ಹೊಸದೊಂದು ಸಾಧ್ಯತೆಗೆ ತೆರೆದುಕೊಳ್ಳುತ್ತಿದ್ದುಗುಪ್ತವಾಗಿರುವ ಪ್ರವಾಸಿತಾಣಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿ, ಹೊಸ ಪ್ರವಾಸಿಗರ ಸೆಳೆದು ಕ್ಷೇತ್ರದ ಆರ್ಥಿಕ ಶಕ್ತಿಗೆ ಟಾನಿಕ್ ಆಗುತ್ತದೆ ಹೆಚ್ಚಿನವರ ಅಭಿಪ್ರಾಯ. ಸೃಷ್ಟಿಸುವ ಯೋಜನೆ ರೂಟ್ ಸಾರಿಗೆ ಹೊಸ ಬೈಂದೂರು ಕ್ಷಿತಿಜ ನೇಸರ ಧಾಮದಿಂದ ಸೋಮೇಶ್ವರ ಬೀಚ್ ಅದ್ಭುತದ ಅನಾವರಣ ಆಗೋದು ಹೀಗೆ.
ಬೈಂದೂರು ಕ್ಷೇತ್ರಪರಂಪರೆ, ಸಾಂಸ್ಕೃತಿಕ ವೈವಿಧ್ಯ, ಸಂಸ್ಕೃತಿ ಉಳಿಸಿಕೊಂಡು ಪ್ರವಾಸಿಗರನ್ನು ಸೆಳೆಯುವ ಜತೆ ಭಕ್ತರಿಗೆ ದೇವಸ್ಥಾನಗಳ ದರ್ಶನ ಮಾಡಿಸುವುದು ಈ ಯೋಜನೆಯ ಉದ್ದೇಶ. ಈಗಾಗಲೇ ಸಾರಿಗೆ ಅಧಿಕಾರಿಗಳ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಆರಂಭದಲ್ಲಿ ತಿಂಗಳ ಮೊದಲ ದಿನ ಅಂತ ನಿಶ್ಚಯಿಸಲಾಗಿದ್ದು, ಬೇಡಿಕೆ ಹೆಚ್ಚಾದಂತೆ ವಿಸ್ತರಣೆ ಆಗಲಿದೆ.
| ಗುರುರಾಜ್ ಗಂಟಿಹೊಳೆ ಬೈಂದೂರು ಶಾಸಕ
ಸಮೀಪದ ಹಸಿರು ಕಾನನದ ನಡುವೆ ಧುಮ್ಮಿಕ್ಕುವಂತೆ ಭ್ರಮಾಲೋಕ ಕೂಸಳ್ಳಿ ಫಾಲ್ಸ್. ಚಾರಣ ಪ್ರಿಯರಿಗಿದೆ ಸ್ವರ್ಗ ಕೂಸಳ್ಳಿ, ಮೇಗಣಿ, ಅರಿಶಿನಗ ಕಣ್ಣಿಗೆ ಹಬ್ಬ ನೀಡುವುದಷ್ಟೇ ಅಲ್ಲ ಚಾರಣಕ್ಕೂ ಹೇಳಿ ಮಾಡಿಸಿದ ಸ್ಥಳ. ಬೆಳ್ಳಲ್ ತೀರ್ಥ ಪೌರಾಣಿಕ ಹಿನ್ನೆಲೆ ಹೊಂದಿರುವ ಪ್ರಕೃತಿ ಸೌಂದರ್ಯದ ಗಣಿ, ಮರವಂತೆ ತಾಸಿ ಬೀಚ್ ಕಡಲು ಸೌಪರ್ಣಿಕಾ ನದಿಯ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಒಂದು ರೋಚಕ ಅನುಭವ.
ಸೋಮೇಶ್ವರ ಬೀಚ್, ಒತ್ತಿನೆಣೆ ಕ್ಷಿತಿಜ ನೇಸರ ಧಾಮ, ತೂದಳ್ಳಿ ಫಾಲ್ಸ್, ಮೇಗಣಿ A ಫಾಲ್ಸ್, ಆನೆಜರಿ, ಬೆಳ್ಳಲ್ ತೀರ್ಥ, ಗಂಗೆಬೈಲು, ತ್ರಾಸಿ ಮರವಂತೆ ಬೀಚ್, ಗಂಗೊಳ್ಳಿ ಲೈಟ್ ಹೌಸ್, ಕೊಲ್ಲೂರು ಘಾಟಿ, ಬೈಂದೂರು ಕಡಲತೀರ, ಕೊಲ್ಲೂರು, ಶಂಕರನಾರಾಯಣ, ಸೌಕೂರು ಶ್ರೀದುರ್ಗಾಪರಮೇಶ್ವರಿ, ಕೆರಾಡಿ ಮೂಡುಗಲ್ಲುವಾರ, ಸೇನೇಶ್ವರ, ಸೋಮೇಶ್ವರ, ಉಪ್ಪುಂದ ದುರ್ಗಾಪರಮೇಶ್ವರಿ, ತಲ್ಲೂರು ಶ್ರೀ ಮಹಾಲಿಂಗೇಶ್ವರ, ಆನೆಗುಡ್ಡೆ ಸಿದ್ಧಿವಿನಾಯಕ, ಬನ್ನೂರು ಶ್ರೀ ಮಹಾಲಿಂಗೇಶ್ವರ, ಗುಜ್ಜಾಡಿ ಗುಹೇಶ್ವರ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಹಳ್ಳಿಹೊಳೆ ಹಲವರಿಮಠ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ, ಮೆಟ್ಕಲ್ಲುಡ್ಡ ವಿನಾಯಕ ಧಾರ್ಮಿಕ ಕ್ಷೇತ್ರಗಳು, ಆಳರಸರ ಸೇನಾಪುರ, ಪಡುಕೋಣೆ, ಕದ್ರುಗಳು ಬೈಂದೂರು ಕ್ಷೇತ್ರದ ಐತಿಹಾಸಿಕ ಸ್ಥಳಗಳು, ಸೂರ್ಯಾಸ್ತಮಾನ, ಸೂರ್ಯೋದಯ, ಚಂದ್ರಾಸ್ತಮಾನದ ವಿಹಂಗಮ ನೋಟಕ್ಕೂ ಬೈಂದೂರು ಕ್ಷೇತ್ರದಲ್ಲಿ ಅವಕಾಶವಿದೆ. ಜಾಗಗಳು
ಕೊಲ್ಲೂರಿಗೆ ಪ್ರತಿದಿನ 7ರಿಂದ 8 ಸಾವಿರ ಯಾತ್ರಿಗಳು ಬರುತ್ತಿದ್ದು, ವಿನೂತನ ಯೋಜನೆಯಲ್ಲಿ ಅವರಿಗೆ ಪ್ರವಾಸಿತಾಣಗಳ ಪರಿಚಿಸುವ ಕೆಲಸವೂ ಆಗುತ್ತದೆ. ಬೈಂದೂರು ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳ ದರ್ಶನ ತಡವಾಗಿಯಾದರೂ ಆರಂಭವಾಗಿರುವುದು ಸ್ವಾಗತಾರ್ಹ. ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು.
| ವೆಂಕಟೇಶ ಕಿಣಿ ಬೈಂದೂರು ಬೆಸುಗೆ ಫೌಂಡೇಷನ್ ಅಧ್ಯಕ್ಷ
ಬೆಳದಿಂಗಳ ಊಟಕ್ಕೂ ಇದೆ ಧಾಮ ಬೈಂದೂರು ಒತ್ತಿನೆಣಿ ಕ್ಷಿತಿಜ ನೇಸರಧಾಮ ಬೆಳದಿಂಗಳ ಊಟಕ್ಕೆ ಹೇಳಿ ಮಾಡಿಸಿದ ಜಾಗ ಒತ್ತಿನೆಣಿ ಕ್ಷಿತಿಜ ನೇಸರಧಾಮದಲ್ಲಿ ವಿಶಾಲ ಕಡಲು, ನದಿ ಸಮುದ್ರಗಳ ವಿಹಂಗಮ ನೋಟದ ಜತೆ ಕಡಲು ಕೂಡ ಹೆಚ್ಚು ದೂರದವರೆಗೆ ಸಮತಟ್ಟಾಗಿದ್ದು, ಹೆಚ್ಚು ಅಪಾಯಕಾರಿಯಲ್ಲ ಅನ್ನೋದು ವಿಶೇಷ. ಸಂಜೆ ಸೂಯಾಸ್ತಮಾನ, ಚಂದ್ರೋದಯ ಬೇರೊಂದು ಲೋಕ ಸೃಷ್ಟಿಸಿದರೆ, ಸೂರ್ಯೋದಯ ಚಂದ್ರೋದಯ ಒಂದೇ ಸ್ಥಳದಲ್ಲಿ ಕುಳಿತು ವೀಕ್ಷಿಸುವ ಅವಕಾಶವಿದೆ.
ಸಮೃದ್ಧ ಬೈಂದೂರು ಕಲ್ಪನೆಯಡಿ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತದೆ. ನಮ್ಮ ಮೊದಲ ಆದ್ಯತೆ ಉದ್ಯೋಗವಾಗಿದ್ದು, ಟೂರಿಸ್ಟ್ ಪಾಯಿಂಟ್ ಟ್ರಿಪ್ ಮೂಲಕ ಹಲವು ಉದ್ಯೋಗ ಸೃಷ್ಟಿಯಾಗುತ್ತದೆ. ನಮ್ಮಲ್ಲಿ ಏನಿದೆಯೋ ಅದನ್ನು ಬಳಸಿ ಕ್ಷೇತ್ರ ಅಭಿವೃದ್ಧಿ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ಮಾಡಲಾಗುತ್ತದೆ.
| ಸುರೇಶ ಶೆಟ್ಟಿ ಯೋಜನೆ ಕೋಆರ್ಡಿನೇಟರ್