ತಾ.ಪಂ. ಆಡಳಿತಕ್ಕೆ ಹೆಚ್ಚಿನ ಹೊಣೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

sanmana
Published on

ಬೈಂದೂರು: ಬೈಂದೂರು ಕೇಂದ್ರಿತವಾಗಿ ಹೊಸ ತಾಲೂಕು ರಚನೆಯ ಕನಸು ಕೈಗೂಂಡಿದೆ. ಈಗ ತಾಲೂಕಿನ ಅಭಿವೃದ್ಧಿ ಕುರಿತಾಗಿ ಜನರ ನಿರೀಕ್ಷೆಗಳು ಗರಿಗೆದರಿರುವ ಕಾರಣ ಹೊಸತಾಗಿ ಅಸ್ತಿತ್ವ ಪಡೆದಿರುವ ತಾಲೂಕು ಪಂಚಾಯಿತಿ ಮತ್ತು ಅದರ ಅಧ್ಯಕ್ಷ, ಸದಸ್ಯರ ಹೊಣೆ ಹೆಚ್ಚಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಾವುಂದದಲ್ಲಿ ಬೈಂದೂರು ತಾಪಂ ಪ್ರಥಮ ಅಧ್ಯಕ್ಷ ಮಹೇಂದ್ರ ಪೂಜಾರಿ ಅಭಿಮಾನಿಗಳು ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಹುಟ್ಟೂರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಪೂಜಾರಿ, ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ. ತಾಲೂಕಿನ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕಾರ್ಯ ನಿರ್ವಹಿಸುತ್ತೇನೆ ಎಂದರು.

ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಗೌರಿ ದೇವಾಡಿಗ, ಕೆ.ಬಾಬು ಶೆಟ್ಟಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪ್ರಣಯಕುಮಾರ ಶೆಟ್ಟಿ, ನಾವುಂದ ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ ಇದ್ದರು. ಹಿಂಧು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟ್ಟಿ ಸ್ವಾಗತಿಸಿದರು. ವೆಂಕಟೇಶ ವಂದಿಸಿದರು. ಮುಖ್ಯಶಿಕ್ಷಕ ಎ.ಶಿವರಾಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net