

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೇಸಿಗೆ ಮುಗಿಯುವ ಮುನ್ನವೇ ಅಕಾಲಿಕ ಮಳೆ ಅಬ್ಬರ ಜೋರಾಗಿದ್ದು, ಮೊದಲ ಮಳೆಗೆ ಬಹುತೇಕ ಜನಜೀವನ ಅಸ್ತವ್ಯಸ್ಥಗೊಂಡಿದೆ. ಬೈಂದೂರು ತಾಲೂಕು ಆಡಳಿತ ತಕ್ಷಣ ಮಳೆಗಾಲದ ಸಿದ್ಧತೆ ವಾಡಿಕೊಳ್ಳಬೇಕಾಗಿದೆ. ನೆರೆಹಾವಳಿಯಿಂದ ಪ್ರತಿ ವರ್ಷ ಜನ ಕಂಗಾಲಾಗುತ್ತಿದ್ದರೂ ಸಹ ಕನಿಷ್ಠ ಪಕ್ಷ ಕಳೆದ ವರ್ಷದ ಟನೆ ಮರುಕಳಿಸದಂತೆ ಸ್ಥಳೀಯಾಡಳಿತ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.
ಬೈಂದೂರು ಮಳೆಗಾಲದಲ್ಲಿ ಅತೀ ಹೆಚ್ಚು ಹಾನಿಗೊಳಪಡುವ ತಾಲೂಕು ವ್ಯಾಪ್ತಿಯಾಗಿದೆ. ಒಂದೆಡೆ ಕಡಲ ಅಬ್ಬರದಿಂದ ತೀರವಾಸಿಗಳ ಮನೆಗಳಿಗೆ ನೀರು ನುಗ್ಗುವುದು. ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ವರ್ಷವಿಡಿ ನೆರೆ ಹಾವಳಿ, ಅಸಮರ್ಪಕ ಕಾಮಗಾರಿ ಅವಾಂತರ, ಹೆದ್ದಾರಿಯಲ್ಲಿ ಚರಂಡಿಯಿಲ್ಲದೆ ರಸ್ತೆ ತುಂಬಾ ನೀರು ನಿಲ್ಲುವುದು ಸಹಜವಾಗಿದೆ.
ಸಾರ್ವಜನಿಕ ಸಮಸ್ಯೆಗಳಿಗೆ ತಾಲೂಕು ಆಡಳಿತ ಕಚೇರಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ಮಳೆಗಾಲದ ಸಮಸ್ಯೆಗಳಿಗೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಿದರೂ ಇದು ಕಡತಕ್ಕೆ ವಾತ್ರ ಸೀಮಿತವಾಗಿದೆ.
ವಿಪತ್ತು ನಿರ್ವಹಣೆಗೆ ನಂಬರ್ ನೀಡಲಾಗಿದ್ದು, ರಾತ್ರಿ ವೇಳೆ ಕರೆ ಸ್ವೀಕರಿಸುತ್ತಿಲ್ಲ. ಉಪ್ಪುಂದ, ನಾಡ, ಕೊಲ್ಲೂರು, ಯಡ್ತರೆ ಮುಂತಾದ ಕಡೆ ಮೊದಲ ಮಳೆಗೆ ಸಮಸ್ಯೆ ಉಲ್ಬಣಿಸಿದೆ. ಬೈಂದೂರು ಗ್ರಾಮೀಣ ಭಾಗದಲ್ಲಿ ದೊಡ್ಡ ನದಿಗಳು ಹರಿಯುವುದರಿಂದ ಮುನ್ನೆಚ್ಚರಿಕೆ ಅಗತ್ಯವಾಗಿದೆ.
ಬೈಂದೂರು ಪಟ್ಟಣ ಪಂಚಾಯಿತಿ ಒಂದಿಷ್ಟು ತಯಾರಿ ಮಾಡಿಕೊಂಡಿದ್ದು, ಪ್ರತ್ಯೇಕ ತಂಡ ರಚಿಸಿ ಜೆಸಿಬಿ ಮುಂತಾದ ಯಂತ್ರಗಳನ್ನು ದಿನದ 24 ಗಂಟೆ ಸಿದ್ಧಗೊಳಿಸಿದೆ. ವಾತ್ರವಲ್ಲದೆ ನೀರು ಹರಿಯುವ ತಡೆ ಉಂಟಾದಾಗ ಚರಂಡಿಗೆ ಅವಕಾಶ ನೀಡದಿರುವ ವ್ಯಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮಳೆಗಾಲ ಮುಗಿಯುವವರೆಗೆ ಇಲ್ಲಿನ ಖಾಸಗಿ ಕಟ್ಟಡಕ್ಕೆ ಅನುಮತಿ ನೀಡದಿರುವ ಬಗ್ಗೆ ತೀರ್ವಾನ ಕೈಗೊಂಡಿದೆ. ಒಟ್ಟಾರೆಯಾಗಿ ಬೆಳೆಯುತ್ತಿರುವ ಬೈಂದೂರಿನಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳ ಕ್ರಿಯಾಶೀಲ ಚಿಂತನೆ ಅಗತ್ಯವಾಗಿದೆ. ಅಲ್ಲದೇ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಬಹು ಮುಖ್ಯವಾಗಿದೆ. ಜಿಲ್ಲಾಡಳಿತದ ಒತ್ತಡ ಕಾರ್ಯ, ಪ್ರಗತಿ ಪರಿಶೀಲನಾ ಸಭೆಯ ಕೊರತೆ, ಸಾರ್ವಜನಿಕ ಕುಂದು ಕೊರತೆ, ಕಾಟಾಚಾರದ ಸಭೆಗಳು ಅಧಿಕಾರಿಗಳನ್ನು ನಿಯಂತ್ರಣ ಕಳೆದುಕೊಳ್ಳುವಂತೆ ವಾಡಿದೆ. ಹೀಗಾಗಿ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಮಳೆಗಾಲದ ಕುರಿತಂತೆ ಬೈಂದೂರಿನ ಬಗ್ಗೆ ಒಂದಿಷ್ಟು ಗಮನಹರಿಸಬೇಕಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬೈಂದೂರಿನಲ್ಲಿ ಮಳೆಗಾಲದ ಅವಾಂತರ ಸಂಭವಿಸಿಲ್ಲ. ಹೊಸದಾಗಿ ಬಂದಿರುವ ಕಾರಣ ಕಳೆದ ವರ್ಷದ ವಾಹಿತಿ ಪಡೆದು ಸದ್ಯದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು. ಹೆದ್ದಾರಿ ಇಲಾಖೆ ಮತ್ತು ಇತರ ಇಲಾಖೆ, ಜಿಲ್ಲಾಧಿಕಾರಿಗಳ ಸಭೆ ಈಗಾಗಲೇ ನಡೆದಿದೆ. ಮಳೆಗಾಲ ಮುಗಿಯುವ ಮುನ್ನ ಬೈಂದೂರು ತಾಲೂಕು ವ್ಯಾಪ್ತಿಯ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ನಿರ್ದೇಶನ ನೀಡಲಾಗಿದೆ. -ಭೀಮಸೇನ್ ಕುಲಕರ್ಣಿ, ಬೈಂದೂರು ತಹಸೀಲ್ದಾರ https://www.vijayavani.net/sports-help-to-increase-intelligence https://www.vijayavani.net/health-camp-for-the-benefit-of-the-people