

ಬೈಲುಕುಪ್ಪೆ : ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಡೇರಿ ಅಭಿವೃದ್ಧಿಗೆ ಸಹಕರಿಸಿ ಎಂದು ಮೈಮುಲ್ ವಿಸ್ತರಣಾಧಿಕಾರಿ ಎಂ. ಅವಿನಾಶ್ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಹೊಸೂರು. ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024- 25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿರು. ಸಂಘದ ಸದಸ್ಯರು ಯಾವುದೇ ಕಾರಣಕ್ಕೂ ಕಲಬೆರಕೆ ಹಾಲು ಸರಬರಾಜು ಮಾಡಬಾರದು. ಇದರಿಂದ ಸಂಘಕ್ಕೆ ಮತ್ತು ಸದಸ್ಯರಿಗೇ ನಷ್ಟವಾಗುತ್ತದೆ. ಗುಣಮಟ್ಟದ ಹಾಲು ನೀಡುವುದು
ನಮ್ಮ ಧ್ಯೇಯವಾಗಬೇಕು ಎಂದರು. ಹೆಚ್ಚು ಲಾಭ ಪಡೆದಿರುವುದು ಸಾಧನೆಯಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಮಹಮ್ಮದ್ ಹುಸೇನ್ ಮಾತನಾಡಿ, ಸಂಘದಲ್ಲಿ 275 ಸದಸ್ಯರಿದ್ದಾರೆ. 2024- 25ನೇ ಸಾಲಿನಲ್ಲಿ ಸಂಘವು 11.45 ಲಕ್ಷ ರೂ ಆಡಳಿತಾತ್ಮಕ ವೆಚ್ಚ ಮಾಡಿದೆ. ವ್ಯಾಪಾರದಿಂದ 15 ಲಕ್ಷ ರೂ. ಗಳಿಸಿ, 5.99 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಮುಂದಿನ ಸಾಲಿನಲ್ಲೂ ಹೈನುಗಾರರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಎರಡು ಪಟ್ಟು ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಸುಗಳು ಹೆಚ್ಚು ಹಾಲು ಕರೆಯುವಂತೆ ಅನುಸರಿಸಬಹುದಾದ ವಿಧಾನಗಳ ಬಗ್ಗೆ ಡಾ. ಸತೀಶ್ ಮಾಹಿತಿ ನೀಡಿದರು. ಸಂಘಕ್ಕೆ ಹೆಚ್ಚು ಹಾಲು ತರಬರಾಜು ಮಾಡಿದ ಜ್ಯೋತಿ, ಬಾಷಾ, ಸೈಯದ್ ರಿಯಾಜ್ ಅವರಿಗೆ ಸಂಘದ ವತಿಯಿಂದ ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕರಾದ ಶಿವಕುಮಾರ್. ಮಕ್ಬೂಲ್ ಸಾಬ್, ಯೋಗಾನಂದ. ಯಶವಂತ್ ಕುಮಾರ್. ಬಸವರಾಜು, ರಹಮಹತ್ ಉಲ್ಲಾಖಾನ್, ಸ್ವಾಮಿ, ನಾಗರಾಜು .ಜ್ಯೋತಿ. ಗಿರಿಜಾಂಬಿಕೆ .ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್, ಮಾಜಿ ಕಾರ್ಯನಿರ್ವಾಹಕಿ ರಾಜಮಣಿ. ಮುಖಂಡರಾದ ರೇಣುಕಾ ಸ್ವಾಮಿ. ಅನ್ವರ್ ಪಾಶ, ಅಬ್ಬಾಸ್. ಪ್ರಭುಸ್ವಾಮಿ. ಗಿರೀಶ್, ಗಗನ್, ಸಂಜಯ್ ಇದ್ದರು.