

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೋಬಳಿಯ ಬೈಲನರಸಾಪುರ ಗ್ರಾಪಂಗೆ ಅಧ್ಯಕ್ಷೆಯಾಗಿ ಹಸೀನಾ ಖಾನಂ, ಉಪಾಧ್ಯಕ್ಷೆಯಾಗಿ ಮಾಲಾಶ್ರೀ ಶ್ರೀಕಾಂತ್ ಆಯ್ಕೆಯಾದರು.
ಗ್ರಾಪಂನಲ್ಲಿ ರ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಕೆ.ಕುಮಾರ್ ಘೋಷಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ಮಾತನಾಡಿ, ಗ್ರಾಪಂನಿಂದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಲ್ಲಿ ಯಾವುದೇ ಪಕ್ಷ ಭೇದ ಮಾಡಬಾರದು ಎಂದರು.
ಗ್ರಾಪಂ ಸದಸ್ಯರಾದ ಫರಹಾನ ವಹೀದ್‌ಖಾನ್, ಫರಿದಾ ಸುಲ್ತಾನ, ಶಮೀತಾಜ್ ಸೈಯದ್ ಮೈದಿನ್, ಶಹದಾಬ ಅಹ್ಮದ್, ಸರಿತಾ ಬೈರೇಗೌಡ, ಮುಜಾಮೀಲ್ ಖಾನ್, ಅಫಾಖ್ ಖಾನ್, ಮಹಮದ್ ಷರೀಫ್, ತಬ್ರೇಜ್ ಬೇಗ್, ಹಸಿನಾ ಖಾನಂ ಅಮಾನುಲ್ಲಾಖಾನ್, ಎನ್.ಚಂದ್ರಪ್ಪ, ಕೆಂಪಮ್ಮರಾಮಕೃಷ್ಣಪ್ಪ, ರಶ್ಮಿ ಮಂಜುನಾಥ್, ನಾರಾಯಣಮ್ಮ ಚಿನ್ನಪ್ಪಯ್ಯ, ವಿ.ಶ್ರೀನಿವಾಸ್, ಗುರು, ಪಿಡಿಒ ಮುನಿಗಂಗಯ್ಯ ಮುಖಂಡರಾದ ರಫಿ ಉಲ್ಲಾಖಾನ್, ತಬ್ರೇಜ್, ಮುನೀರ್‌ಖಾನ್ ಇದ್ದರು.