

ಬೈಲಹೊಂಗಲ: ಪಟ್ಟಣದ ದಿ. ಬೈಲಹೊಂಗಲ ಕೋ&ಆಪ್ ಬ್ಯಾಂಕ್ ಮುಂಬರುವ ಐದು ವರ್ಷಗಳ ಆಡಳಿತ ಮಂಡಳಿಗೆ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ 19 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಅಧ್ಯರಾಗಿ ಡಾ.ಬಸವರಾಜ ಮೆಟಗುಡ್ಡ ಅವಿರೋಧವಾಗಿ ಪುನರಾಯ್ಕೆಯಾದರೆ, ಉಪಾಧ್ಯರಾಗಿ ಮಲ್ಲಪ್ಪ ಬೋಳನ್ನವರ ಅವಿರೋಧ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಶಾಹಿನ್ ಅಖ್ತರ್ ಕಾರ್ಯನಿರ್ವಹಿಸಿದರು. ಅಧ್ಯ ಡಾ.ಬಸವರಾಜ ಮೆಟಗುಡ್ಡ ಮಾತನಾಡಿ, ಆಡಳಿತ ಮಂಡಳಿ ಸಹಕಾರದೊಂದಿಗೆ ಶತಮಾನದ ಅಂಚಿನಲ್ಲಿರುವ ಬ್ಯಾಂಕಿನ ಪ್ರಗತಿಗೆ ಪ್ರಾಮಾಣಿಕತೆಯಿಂದ ಶ್ರಮಿಸಿ ಸದಸ್ಯರು ಹಾಗೂ ಗ್ರಾಹಕರ ಹಿತ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.
ಬ್ಯಾಂಕಿಗೆ ಬೆಳಗಾವಿ ಜಿಲ್ಲಾ ಪಟ್ಟಣ ಸಹಕಾರಿ ಬ್ಯಾಂಕುಗಳ ಅಸೋಸಿಯೇಷನ್ ವತಿಯಿಂದ ಬೆಳಗಾವಿ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೂತನ ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಮೆಟಗುಡ್ಡ, ಚನ್ನಬಸಪ್ಪ ಹೊಂಡದಕಟ್ಟಿ, ಸಿದ್ದರಾಮ ಪತ್ತೆಣ್ಣವರ, ಅನಿಲ ಮೆಟಗುಡ್ಡ, ರಾಜಶೇಖರ ಮೆಟಗುಡ್ಡ, ಬಸವರಾಜ ಸಾಲಿಮಠ, ಚನ್ನಪ್ಪ ಹೊಸೂರ, ವಿಶ್ವನಾಥ ಮೆಟಗುಡ್ಡ, ಮಹಮ್ಮದರಫೀಕ್ ನಾಯಕ, ಗುರಪ್ಪ ಮೆಟಗುಡ್ಡ, ವಿಜಯಕುಮಾರ ಬೆಳವಡಿ, ಬಸವರಾಜ ಮಡಿವಾಳರ, ಬಸಪ್ಪ ಬೆಟಗೇರಿ, ಅಶೋಕ ಮೆಟಗುಡ್ಡ, ಶ್ರೀಶೆಲ ಮೆಟಗುಡ್ಡ, ರಾಜಶ್ರೀ ಬಿಳ್ಳೂರ, ಕವಿತಾ ಹೊಸೂರ ಇತರರಿದ್ದರು.