ಫೆ. 1ರಂದು ಬೈಕೆರೆ ನಾಗೇಶ್ ಸ್ಮರಣೆ

29 skpp 1
Published on

ಸಕಲೇಶಪುರ: ಮಲೆನಾಡಿನ ಕಣ್ಮಣಿ ಎಂದೇ ಖ್ಯಾತರಾಗಿದ್ದ ದಿವಂಗತ ಬೈಕೆರೆ ನಾಗೇಶ್ ಸ್ಮರಣೆ ಕಾರ್ಯಕ್ರಮನ್ನು ಫೆ. 1ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಹೇಳಿದರು. ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೈಕೆರೆ ಅವರ ಅಭಿಮಾನಿಗಳು, ಒಡನಾಡಿಗಳು ಮತ್ತು ಉಪಕೃತರು ಭಾಗವಹಿಸಲಿದ್ದಾರೆಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾರಂಭದಲ್ಲಿ ಬೈಕೆರೆ ಅಭಿಮಾನಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು ಎಂದು ಅವರು ಹೇಳಿದರು.
ದೆಹಲಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಕೊಂಡಿಯಾಗಿ ದೆಹಲಿಯಲ್ಲಿ ಸುಮಾರು 3 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಬೈಕೆರೆ ಬಹುತೇಕ ಸಚಿವರಿಗೆ ಮಾರ್ಗದರ್ಶನ ಮಾಡಿದ್ದರು. ತಾಲೂಕಿನ ಸಾಕಷ್ಟು ಅಭಿವೃದ್ಧಿ ಯೋಜನೆ ಅನುಷ್ಠಾನದಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ನೂರಾರು ಬಡ ವಿದ್ಯಾರ್ಥಿಗಳಿಗೆ ಅವರು ಉದ್ಯೋಗ ಕೂಡಿಸಿದ್ದರು ಎಂದು ವಿಶ್ವನಾಥ್ ಸ್ಮರಿಸಿದರು.
ವೀರಶೈವ ಮುಖಂಡ ಬಾಳ್ಳುಪೇಟೆ ಜಗನ್ನಾಥ್ ಮಾತನಾಡಿ, ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದ ಬೈಕೆರೆ ನೂರಾರು ಯುವಕರಿಗೆ ಸ್ಫೂರ್ತಿ ಆಗಿದ್ದರು. ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಮಲೆನಾಡು ವೀರಶೈವ ಸಮಾಜ, ಒಕ್ಕಲಿಗರ ಸಮಾಜ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ ಎಂದರು.

ಪ.ಗೋಷ್ಠಿ
29- (ಚಿತ್ರ ಇದೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net