ದ್ವಿಚಕ್ರ ವಾಹನ ಡಿಕ್ಕಿ ಪಾದಚಾರಿ ಸಾವು

PRABHAKHAR BHAMMAsHETTY
Published on

ಹುಮನಾಬಾದ್: ದ್ವಿಚಕ್ರ ವಾಹನ ಡಿಕ್ಕಿಯಿಂದ ಪಾದಚಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಟ್ಟಣದ ಸಿಡಿಪಿಒ ಕಚೇರಿ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಜರುಗಿದೆ. ಪಟ್ಟಣದ ಪಿಕೆಪಿಎಸ್ ಮಾಜಿ ಕಾರ್ಯದರ್ಶಿ ತಾಲೂಕಿನ ಧುಮ್ಮನಸೂರ ಗ್ರಾಮದ ಪ್ರಭಾಕರ ಭಮ್ಮಶೆಟ್ಟಿ(೭೦) ಮೃತರು. ಸಂಜೆ ವಾಯುವಿಹಾರಕ್ಕೆ ತೆರಳಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ ಬಸವರಾಜ ಭೇಟಿ ನೀಡಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭಾಕರ ಅಂತ್ಯಕ್ರಿಯೆ ಸೋಮವಾರ ಧುಮ್ಮನಸೂರ ಗ್ರಾಮದ ತೋಟದಲ್ಲಿ ಮಧ್ಯಾಹ್ನ ೧ಕ್ಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net