

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ನೆಡುತೋಪು, ರಸ್ತೆ ಅಂಚು ಮತ್ತು ಸಾರ್ವಜನಿಕರಿಗೆ ಭೂಮಿಯನ್ನು ಹಸಿರುಗೊಳಿಸಲು ಅರಣ್ಯ ಇಲಾಖೆಯಿಂದ ಬ್ರಹ್ಮಾವರ ಬೈಕಾಡಿಯ ಸಸ್ಯಕ್ಷೇತ್ರದಲ್ಲಿ 42 ಸಾವಿರ ನಾನಾ ಜಾತಿಯ ಸಸ್ಯಗಳು ಸಿದ್ಧಗೊಂಡಿವೆ.
ರಾಷ್ಟ್ರೀಯ ಹೆದ್ದಾರಿ 66 ಬಳಿಯಲ್ಲಿರುವ ಅರಣ್ಯ ಇಲಾಖೆಯ 3 ಎಕರೆ ಜಾಗದಲ್ಲಿ ಔಷಧ ಸಸ್ಯಗಳು ಮತ್ತು ಪ್ರಕೃತಿಗೆ ಪೂರಕವಾಗುವ ಪುತ್ರಂಜೀವ, ಸೀತಾ ಅಶೋಕ, ಸಾಗುವಾನಿ, ಮಾಗನಿ, ರೆಂಜ, ಬಿಲ್ವಪತ್ರೆ, ಬಿದಿರು, ಬೆತ್ತ, ಬನ್ನೇರಳೆ, ಡಾಲ್ಚಿನಿ, ಬೀಟೆ ಸೇರಿದಂತೆ ಅನೇಕ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದೆ.
ಜೂ.1ರಿಂದ 3 ಮತ್ತು 6 ರೂ.ನಲ್ಲಿ ವಿತರಣೆಗೊಳ್ಳಲಿದ್ದು, ಅರಣ್ಯ ಇಲಾಖೆ ರಸ್ತೆ ಬದಿ 2,700, ನೆಡುತೋಪಿನಲ್ಲಿ 12,000 ನಾಟಿ ಮಾಡಲಿದ್ದು, ಉಳಿದ ಗಿಡವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು.
ನಮ್ಮಲ್ಲಿ ನೂರಾರು ಸಸ್ಯ ಪ್ರಭೇದದ ಗಿಡಗಳನ್ನು ಅರಣ್ಯ ಇಲಾಖೆ ವತಿಯಿಂದ ಬೆಳೆಸಲಾಗಿದ್ದು, ಪರಿಸರ ಸಂರಕ್ಷಣೆ ದೃಷ್ಟಿಯಲ್ಲಿ ಜೂನ್ 1ರಿಂದ ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಯವರು ಸೂಕ್ತ ಭೂಮಿಯ ದಾಖಲೆ ನೀಡಿ ಕಡಿಮೆ ಬೆಲೆಯಲ್ಲಿ ಗಿಡಗಳನ್ನು ಪಡೆಯಬಹುದು. - ಹರೀಶ್ ಕೆ., ಉಪವಲಯ ಅರಣ್ಯಾಧಿಕಾರಿ, ಬ್ರಹ್ಮಾವರ