

ರಾಮನಗರ: ಚನ್ನಪಟ್ಟಣ ಉಪಚನಾವಣೆಯ (ByElections 2024) ಮೊದಲ ಹಂತದ ಮತ ಎಣಿಕೆ ಪ್ರಕ್ರಿಯೆಯಲ್ಲಿ ‘ಕೈ’ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸಿದ್ದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಮುನ್ನಡೆ ಪಡೆದುಕೊಂಡರು. ಈ ಲೆಕ್ಕಾಚಾರ ಎರಡನೇ ಸುತ್ತಿನಲ್ಲಿ ಬದಲಾಯಿತು. ದ್ವಿತೀಯ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಸಿಪಿವೈ ಇದೀಗ 6ನೇ ಸುತ್ತಿನಲ್ಲೂ ಭಾರೀ ಹಿನ್ನಡೆ ಎದುರಿಸಿದ್ದಾರೆ.
6ನೇ ಸುತ್ತಿನಲ್ಲಿ ನಿಖಿಲ್ ಮುನ್ನುಗುತ್ತಿದ್ದು, 780 ಮತಗಳಿಂದ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
8ನೇ ಸುತ್ತಿನಲ್ಲಿ 11,178 ಮತಗಳಿಂದ ಸಿಪಿವೈ ಭಾರೀ ಮುನ್ನಡೆ ಸಾಧಿಸಿದ್ದು, ಈ ಅಂತರ ನಿಖಿಲ್ಗೆ ದೊಡ್ಡ ಆಘಾತ ತಂದೊಡ್ಡಿದೆ.