ಬಿಜೆಪಿಯ ನೋಟು ಕಾಂಗ್ರೆಸ್​ಗೆ ಓಟು ಅಂದ್ರೆ ದೂರು ಕೊಡ್ತಾರೆ - ಡಿಕೆಶಿ ಆಕ್ರೋಶ

D K Shivakumar KPCC
Published on

ತುಮಕೂರು: ಶಿರಾದಲ್ಲಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದ್ದರೂ ಎಲೆಕ್ಷನ್ ಕಮಿಷನ್ ಕಣ್ಣುಮುಚ್ಚಿ ಕೂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು. ಶಿರಾ ತಾಲೂಕಿನ ಚನ್ನೇನಹಳ್ಳಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಆರ್. ಆರ್. ನಗರದಲ್ಲೂ ಹೀಗೆ ಆಗಿದೆ. ಬಿಜೆಪಿಯ ನೋಟು ಕಾಂಗ್ರೆಸ್​​ಗೆ ಓಟು ಎಂದಿದ್ದಕ್ಕೆ ನನ್ನ ಮೇಲೆ ದೂರು ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ನಾನು ಎಲ್ಲ ದಾಖಲೆ ಇಟ್ಟುಕೊಂಡೇ ಮಾತನಾಡಿದ್ದೇನೆ. ಎಲ್ಲ ವಿಡಿಯೋ ದಾಖಲೆಗಳು ನನ್ನ ಬಳಿ ಇದೆ. ಮೊದಲು ಅಭ್ಯರ್ಥಿಗಳನ್ನೇ ಅನರ್ಹ ಮಾಡಬೇಕು ಅನ್ಸುತ್ತೆ ಆ ರೀತಿ ಅವರು ಚುನಾವಣಾ ಅಕ್ರಮ ವೆಸಗುತ್ತಿದ್ದಾರೆ ಎಂದು ದೂರಿದರು.

ಪ್ರತಿಯೊಂದು ವಿಚಾರದಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ವಿರುದ್ಧವಾಗಿ ಎಲೆಕ್ಷನ್ ಮಾಡ್ತಿದ್ದಾರೆ. ಜನ ಯಾವುದಕ್ಕೂ ಜಗ್ಗೋದಿಲ್ಲ ಬಗ್ಗೋದಿಲ್ಲ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ನಡೆಸುತ್ತಿರುವುದಾಗಿ ಚುನಾ ವಣಾ ಆಯೋಗಕ್ಕೆ ನಾವು ದೂರು ದಾಖಲಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net