ಫೆ.17ರಂದು ಬೈ ಬೈ ಎನಿಮಿಯಾ ಶಿಬಿರ

Published on

ಮಂಗಳೂರು: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ(ಐಎಪಿ) ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ಫೆ.17ರಂದು ಮಂಗಳೂರು ಮತ್ತು ಮೂಡುಬಿದಿರೆಯಲ್ಲಿ ಮಕ್ಕಳಲ್ಲಿ ರಕ್ತಹೀನತೆ ತಪಾಸಣೆ, ಜಾಗೃತಿಯ ‘ಬೈ ಬೈ ಎನಿಮಿಯಾ’ ಶಿಬಿರ ಜರಗಲಿದೆ ಎಂದು ಕೇಂದ್ರ ಐಎಪಿ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ. ಶ್ರೀಕೃಷ್ಣ ಜಿ.ಎನ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಕ್ಕಳಲ್ಲಿ ರಕ್ತಹೀನತೆಯ ನಿವಾರಣೆಗಾಗಿ ಈ ರಾಷ್ಟ್ರೀಯ ಅಭಿಯಾನ ಆಯೋಜಿಸಲಾಗಿದ್ದು ಫೆ.17ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಂಗಳೂರಿನ ಕೊಡಿಯಾಲಬೈಲ್ ಶಾರದಾ ವಿದ್ಯಾಲಯದಲ್ಲಿ, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಮೂಡುಬಿದಿರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಮೂಡುಬಿದಿರೆಯ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತಹೀನತೆ ತಪಾಸಣೆ, ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಈ ಬಸ್ ಯಾತ್ರೆ ಮಹಾರಾಷ್ಟ್ರದಿಂದ ಆರಂಭಗೊಂಡಿದ್ದು ದೇಶದಾದ್ಯಂತ ಸಂಚರಿಸಲಿದೆ ಎಂದರು.

ಜಿಲ್ಲಾ ಐಎಪಿ ಅಧ್ಯಕ್ಷೆ ಡಾ. ಸ್ವಾತಿ ರಾವ್, ಕಾರ್ಯದರ್ಶಿ ಡಾ. ಅಕ್ಷತಾ ಶೆಟ್ಟಿ, ಖಜಾಂಚಿ ಡಾ. ನಿಖಿಲ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net