

ಬ್ಯಾಡಗಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬಡವರ ಬಗೆಗೆ ವಿಶೇಷ ಕಾಳಜಿ ತೋರಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಎಸ್‌ಡಿಎಂ ದಂತ ಮಹಾವಿದ್ಯಾಲಯ ಸತ್ತೂರು, ಮೆಣಸಿನಕಾಯಿ ವರ್ತಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರದಲ್ಲಿ ಅವರು ಮಾತನಾಡಿದರು.
ಹಿರಿಯ ವೈದ್ಯೆ ಪ್ರೀತಾ ಜಿ. ಶೆಟ್ಟಿಬಾಯಿ ಮಾತನಾಡಿ, ಬಹುತೇಕರು ದೇಹದ ಎಲ್ಲ ಅಂಗಗಳಿಗೆ ಆದ್ಯತೆ ನೀಡುತ್ತಾರೆ. ಅದರೆ, ಬಾಯಿ, ಹಲ್ಲುಗಳ ಬಗ್ಗೆ ನಿರ್ಲಕ್ಷೃ ತೊರುತ್ತಾರೆ. ಇದು ಒಳ್ಳೆಯದಲ್ಲ. ಹಲ್ಲುಗಳ ದೇಹಕ್ಕೆ ಹೆಚ್ಚು ಅಗತ್ಯವಾಗಿದ್ದು, ಹಲ್ಲು ಹುಳುಕು ಆಗದಂತೆ ಎಚ್ಚರಿಕೆ ವಹಿಸಬೇಕು. ಯುವಕರು ಗುಟ್ಖಾ ಸೇವನೆ ಮಾಡಬಾರದು ಎಂದರು.
ರಘಪತಿ ಜಿ., ರಾಜು ಮೋರಗೇರಿ, ಮಾಲತೇಶ ಆಲದಗೇರಿ, ವೀರಯ್ಯ ಬೂದಿಹಾಳಮಠ, ಮಾಲತೇಶ ಅರಳೀಮಟ್ಟಿ, ನಾಗವೇಣಿ ಸಾಳುಂಕೆ, ನೇತ್ರಾವತಿ ಗೌಡ, ಶೀತಲ ಎಂ., ಸೈಯದ್ ಮಲ್ಲೂರು, ಶಾಂತಾ ಬಿ.ಎಂ. ಶಿಲ್ಪಾ ಇತರರಿದ್ದರು.