ರಾಷ್ಟ್ರಕ್ಕೆ ಮಠಾಧೀಶರು, ಸಂತರ ಕೊಡುಗೆ ಅಪಾರ

bydagi rambhapuri
Published on

ಬ್ಯಾಡಗಿ: ಸನಾತನ ಪರಂಪರೆ ಹಾಗೂ ಧಾರ್ವಿುಕ ಇತಿಹಾಸ ಹೊಂದಿರುವ ರಾಷ್ಟ್ರದಲ್ಲಿ ಮಠಾಧೀಶರು ಹಾಗೂ ಸಂತರು ತ್ಯಾಗದ ಮೂಲಕ ವಿಶಿಷ್ಟ ಕೊಡುಗೆ ನೀಡಿದ್ದಾರೆ. ನಾವೆಲ್ಲರೂ ಅವರನ್ನು ಸ್ಮರಿಸುವ ಮೂಲಕ ಮಾರ್ಗದರ್ಶನ ಪಡೆಯಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಶ್ರೀ ಶನೀಶ್ವರಸ್ವಾಮಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ 6ನೇ ವರ್ಷದ ಕಾರ್ತಿಕೋತ್ಸವ ಹಾಗೂ ಧರ್ಮಜಾಗೃತಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

ದೇಶದಲ್ಲಿ ಮಹಾನ್ ಸಾಧಕರು ಜನ್ಮ ತಾಳಿದ್ದಾರೆ. ಇಲ್ಲಿ ಮಠ, ಮಂದಿರ ಹಾಗೂ ಋಷಿ ಕೇಂದ್ರಗಳು ನಾಡಿನ ಜನರಿಗೆ ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿವೆ. ಪರಿಣಾಮ ಸಾಮಾಜಿಕ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಇಂತಹ ಧಾರ್ವಿುಕ ಪರಂಪರೆಗೆ ಉಳಿವು ಅಳಿವು ಕುರಿತು ಸಮಗ್ರ ಚಿಂತನೆ ಜರುಗಬೇಕಿದೆ. ವಾಸ್ತವ ಧರ್ಮಸ್ಥಿತಿಗತಿ ಕುರಿತು ನಾವೆಲ್ಲರೂ ಚಿಂತನೆ ಮಾಡದಿದ್ದಲ್ಲಿ ನಾವು ಗಂಡಾಂತರ ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಗೃತಿ ಹಾಗೂ ಧರ್ಮಕಾರ್ಯ ಆಯೋಜಿಸಬೇಕಿದೆ ಎಂದರು.

ಬ್ಯಾಡಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಖ್ಯಾತಿಯಾದಂತೆ ಇಲ್ಲಿ ಧರ್ಮರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಕುಮಾರೇಶ್ವರ ಧಾರ್ವಿುಕ ಪಾಠಶಾಲೆ, ಮಂದಿರಗಳು, ದೇವಸ್ಥಾನಗಳು ಹಾಗೂ ವಿವಿಧ ಧರ್ಮಕೇಂದ್ರಗಳು ಧರ್ಮ ಉಳಿಸಿ ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ. ಮಠಾಧೀಶರು ಆಗಾಗ ಧರ್ಮಜಾಗೃತಿ, ಸಂಸ್ಕೃತಿ ಕುರಿತು ಅರಿವು ಮೂಡಿಸುತ್ತಿದ್ದಾರೆ. ಶನೀಶ್ವರ ದೇವಮಂದಿರ ನಿರ್ವಿುಸಿ, ಕಳಸಾರೋಹಣದ ದೊಡ್ಡ ಕಾರ್ಯಕ್ರಮ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಿತ್ಯ ಇಲ್ಲಿ ಭಗವಂತನ ಆರಾಧನೆ ನಡೆಯಲಿ ಎಂದು ಶ್ರೀಗಳು ಹೇಳಿದರು.

ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಪಂಚಪೀಠಗಳು ದೇಶದಲ್ಲಿ ಹಿಂದು ಪರಂಪರೆಯನ್ನು ಮುನ್ನಡೆಸಿಕೊಂಡು ಸರ್ವಧರ್ವಿುಯರಿಗೆ ಧಾರ್ವಿುಕ ಸೇವೆ ನೀಡುತ್ತಿವೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶದ ಮೂಲಕ ಭಾವೈಕ್ಯ ಬಿಂಬಿಸುತ್ತಿದೆ. ಶತಶತಮಾನಗಳಿಂದ ಜಗದ್ಗುರುಗಳ ಪೀಠ ನಾಡಿನಾದ್ಯಂತ ಧರ್ಮ ಜಾಗೃತಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಧರ್ಮ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಗುರುಪರಂಪರೆ ಮುನ್ನಡೆಸಿಕೊಂಡು ಹೋಗೋಣ ಎಂದರು.

ಧರ್ಮಸಭೆಯಲ್ಲಿ ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಸ್ವಾಮೀಜಿ, ಮಡ್ಲೂರಿನ ಮುರುಘರಾಜೇಂದ್ರ ಸ್ವಾಮೀಜಿ, ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ವೇ. ರಾಚಯ್ಯಸ್ವಾಮಿಗಳು ಓದಿಸೋಮಠ. ಮಂಜಯ್ಯಶಾಸ್ತ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕತೆಯನ್ನು ಶನೀಶ್ವರ ಮಂದಿರ ಟ್ಟಸ್ಟ್ ಅಧ್ಯಕ್ಷ ಚಂದ್ರಪ್ಪ ಕಾರಗಿ ವಹಿಸಿದ್ದರು.</p><p>ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ನ್ಯಾಯಾಧೀಶರಾದ ಶಂಕರ ಕಲ್ಕಣಿ, ಸತೀಶ ಎಸ್.ಟಿ., ವರ್ತಕ ಲಕ್ಷ್ಮೀ ನಾರಾಯಣ ಮೇಲಗಿರಿ, ದುರಗಪ್ಪ ಪಾದ್ರೆ, ಡಾ. ಪ್ರೇಮಾನಂದ ಲಕ್ಕಣ್ಣನವರ ಇತರರಿದ್ದರು.

ಜಗದ್ಗುರುಗಳ ಇಷ್ಟಲಿಂಗ ಪೂಜೆ

ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯ ಶಿರಡಿ ಸಾಯಿಬಾಬಾ ಮಂದಿರದ ಕಾರ್ತಿಕೋತ್ಸವ ಅಂಗವಾಗಿ ರಂಭಾಪುರಿ ಪೀಠದ ಬಾಳೆಹೊನ್ನೂರಿನ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರ ಇಷ್ಟಲಿಂಗ ಮಹಾಪೂಜೆ, ಸಾಮೂಹಿಕ ವಿವಾಹ ಮಹೋತ್ಸವ ನ. 28ರಂದು ಬೆಳಗ್ಗೆ 7ಗಂಟೆಗೆ ಜರುಗಲಿದೆ. ಸಂಜೆ 6.30ಕ್ಕೆ ಧಮೋತ್ತೇಜಕ ಧರ್ಮಸಭೆ, 7 ಗಂಟೆಗೆ ಕಾರ್ತೀಕೋತ್ಸವಕ್ಕೆ ಜಗದ್ಗುರುಗಳಿಂದ ಚಾಲನೆ ನೀಡಲಾಗುವುದು. ಗುಡ್ಡದಮಲ್ಲಾಪುರ ದಾಸೋಹಮಠದ ಮೂಕಪ್ಪಸ್ವಾಮಿಗಳು, ಬಂಕಾಪುರದ ಅರಳೆಲೆಮಠದ ರೇವಣಸಿದ್ಧೇಶ್ವರ ಶ್ರೀಗಳು, ರಾಣೆಬೆನ್ನೂರಿನ ಶನೀಶ್ವರಮಠದ ಶಿವಯೋಗಿ ಶ್ರೀಗಳು, ಮಳಲಿ ಸಂಸ್ಥಾನಮಠದ ಗುರುನಾಗಭೂಷಣ ಶ್ರೀ, ಬ್ಯಾಡಗಿ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀ, ಹೇರೂರಿನ ಗುಬ್ಬಿನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಶ್ರೀ, ಗುರುಮಹೇಶ್ವರ ಶ್ರೀ, ರೇವಣಸಿದ್ಧೇಶ್ವರ ಶ್ರೀ, ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಗುರುಲಿಂಗ ಶ್ರೀ, ಗುರುಸಿದ್ಧ ಸ್ವಾಮೀಜಿ ಧರ್ಮಸಭೆ ಸಾನ್ನಿಧ್ಯ ವಹಿಸುವರು. ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಎಸ್.ಆರ್.ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ವಿ.ವಿ. ಹಿರೇಮಠ, ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿಗಳು ದಾಸೋಹಮಠ, ವೇ. ರಾಚಯ್ಯಸ್ವಾಮಿಗಳು ಓದಿಸೋಮಠ, ಮುರಿಗೆಪ್ಪ ಶೆಟ್ಟರ, ಕೆ. ರವೀಂದ್ರ, ಭಾರತಿ ಪೂಜಾರ, ಎಂ.ಎಂ. ಕೆಂಬಿ, ಅಶೋಕ ಮುತ್ತೂರು ಪಾಲ್ಗೊಳ್ಳಲಿದ್ದಾರೆ ಎಂದು ಸಾಯಿಮಂದಿರ ಧರ್ಮದರ್ಶಿ ಮಂಜಯ್ಯಶಾಸ್ತ್ರೀಗಳು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೋಟೋ27ಬಿವೈಡಿ1 ಬ್ಯಾಡಗಿಯ ಸಾಯಿ ಮಂದಿರ ದೇವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net