ಜನರ ವಿಶ್ವಾಸ, ನಂಬಿಕೆ ಉಳಿಸಿಕೊಂಡ ಸಂಘ

12-BYD-2 VITARANE
Published on

ಬ್ಯಾಡಗಿ: ಶತಮಾನ ಪೂರೈಸಿದ ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆ, ಕರ್ತವ್ಯ ಪ್ರಶಂಸೆ ಪಡೆದಿದೆ ಎಂದು ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
1921ರಲ್ಲಿ ನಾಲ್ಕಾರು ಜನರ ಷೇರಿನಿಂದ ಆರಂಭವಾದ ಸಹಕಾರಿ ಸಂಘ ಸ್ಥಳೀಯರ ವಿಶ್ವಾಸ ಹಾಗೂ ನಂಬಿಕೆ ಉಳಿಸಿಕೊಂಡು ಅಭಿವೃದ್ಧಿಯತ್ತ ಸಾಗಿದೆ. ಈಗ ಸಾಕಷ್ಟು ಠೇವಣಿ ಹಾಗೂ ಷೇರು ಸಂಗ್ರಹವಾಗಿದೆ. ಹೀಗಾಗಿ, ವಾರ್ಷಿಕವಾಗಿ ಲಕ್ಷಾಂತರ ರೂ. ಲಾಭದ ಹಾದಿಯಲ್ಲಿದೆ. 2022-23ನೇ ಸಾಲಿನಲ್ಲಿ 12 ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಸಂಘದ ಅಧ್ಯಕ್ಷ ಪರಮೇಶಗೌಡ್ರ ತೆವರಿ ಮಾತನಾಡಿ, ಸಹಕಾರ ಸಂಘದ ಅಭಿವೃದ್ಧಿಗೆ ಸದಸ್ಯರ ಪ್ರಾಮಾಣಿಕ ವ್ಯವಹಾರ ಕಾರಣವಾಗಿದೆ. ಆವರಣದಲ್ಲಿ ಪಡಿತರ, ಗೊಬ್ಬರ, ವಾಣಿಜ್ಯ ಮಳಿಗೆಯ ಬಾಡಿಗೆ ಇತ್ಯಾದಿಗಳು ಆದಾಯದ ಮೂಲವಾಗಿವೆ ಎಂದರು.
ಮೃತಪಟ್ಟ ಷೇರುದಾರ ಲಿಂಗನಗೌಡ ತೋಟದ, ಕರಬಸಪ್ಪ ಹುಲ್ಮನಿ, ಬಸವರಾಜ ಕೊಪ್ಪದ, ಪುಷ್ಟಾ ಆಡಿತನವರ, ಮಾಲತೇಶ ವೀರಾಪುರ ಕುಟುಂಬ ಸದಸ್ಯರಿಗೆ ತಲಾ 5 ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಲಾಯಿತು.
ಸಹಕಾರಿ ಸಂಘದ ಉಪಾಧ್ಯಕ್ಷ ನಾಗನಗೌಡ್ರ ಪಾಟೀಲ, ಸದಸ್ಯ ಕುಮಾರ ಚೂರಿ, ಕುರುವತ್ತೆಪ್ಪ ಪೂಜಾರ, ಚನ್ನಬಸನಗೌಡ್ರ ಹೊಟ್ಟಿಗೌಡ್ರ, ದಿಳ್ಳೆಪ್ಪ ಮೋಟೆಬೆನ್ನೂರು, ಜಗದೀಶ ಕಿರವಾಡಿ, ಚನ್ನಬಸಪ್ಪ ಹುಲ್ಲತ್ತಿ, ಮಂಜನಗೌಡ್ರ ಲಿಂಗನಗೌಡ್ರ, ಸೋಮೇಶ ಚವಟಿ, ಚಂದ್ರಪ್ಪ ಬಾರ್ಕಿ, ಮಲ್ಲೇಶಪ್ಪ ಗೌರಾಪುರ, ಪ್ರೇಮೀಳಾ ಬಿದರಕಟ್ಟೆ, ಪ್ರೇಮಾ ತೋಟದ, ದಾನಪ್ಪ ಚೂರಿ, ವ್ಯವಸ್ಥಾಪಕ ಎ. ಶಿವಶಂಕರಪ್ಪ, ಪಿ.ಎಸ್. ಬಣಕಾರ, ಜಿ.ಎಸ್. ಬಸನಗೌಡ್ರ, ಯು.ಸಿ. ದಾನಮ್ಮವರ, ಎನ್.ಎನ್. ಮಾನಿ, ಸಿ.ಬಿ. ತೆವರಿ, ಎಸ್.ಡಿ. ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net