ವರುಣನ ಆಗಮನಕ್ಕಾಗಿ ಕತ್ತೆ ಮದುವೆ

30-BYD KATTE MADUVE
Published on

ಬ್ಯಾಡಗಿ: ಪಟ್ಟಣದ ಗ್ರಾಮದೇವತೆ ದೇವಸ್ಥಾನದಲ್ಲಿ ರೈತರು ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಕತ್ತೆಗಳ ಮದುವೆ ಮಾಡಿದ್ದಾರೆ. ಹಿಂದಿನ ಕಾಲದಿಂದಲೂ ಮಳೆ ಕಡಿಮೆಯಾದರೆ ವಿಶೇಷ ಪೂಜೆ, ಹೋಮ, ಬೋರ್ಗಲ್ ಪೂಜೆ, ಗೋವಿನ ಪೂಜೆ ಮಾಡಿ ದೈವಕ್ಕೆ ಶರಣಾಗುವ ಸಂಪ್ರದಾಯ ಪಾಲಿಸಲಾಗುತ್ತಿದೆ. ಕತ್ತೆಗಳನ್ನು ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗದಿಂದ ತರಿಸಲಾಗಿತ್ತು. ಮದುವೆ ಸಮಾರಂಭದಲ್ಲಿ ಅರಿಷಿಣ-ಕುಂಕುಮ ಹಚ್ಚುವ, ತಾಳಿ ಕಟ್ಟಿಸುವ ಎಲ್ಲ ಸಂಪ್ರದಾಯವನ್ನು ಕತ್ತೆಗಳ ಮದುವೆಯಲ್ಲೂ ಪಾಲಿಸಲಾಯಿತು. ಪುರೋಹಿತರು ಶಾಸ್ತ್ರಬದ್ಧವಾಗಿ ಮಂತ್ರ ಘೋಷಣೆ, ಅಕ್ಷತಾರೋಪಣ ಮಾಡಿದರು. ಮಾಜಿ ಶಾಸಕ ಸುರೇಶಗೌಡ ಪಾಟೀಲ, ಅಶೋಕ ಮೂಲಿಮನಿ, ಪುಟ್ಟಪ್ಪ ಛತ್ರದ, ಚಂದ್ರಣ್ಣ ಶೆಟ್ಟರ್, ಎಂ.ಆರ್. ಭದ್ರಗೌಡ್ರ, ಅಶೋಕ ಮಾಳೇನಹಳ್ಳಿ, ಈಶ್ವರ ಮಠದ, ಪ್ರಶಾಂತ ಹಾಲನಗೌಡ್ರ, ಬಸವರಾಜ ಸಂಕಣ್ಣನವರ, ಸಿದ್ದಣ್ಣ ಮಾಳೇನಹಳ್ಳಿ, ಶಂಕರ ಬಿದರಿ, ರಾಜು ಚನ್ನಗೌಡ್ರ, ಶಿವಕುಮಾರ ಕಲ್ಲಾಪುರ, ಶಕುಂತಲಾ ಮಠದ, ವಿಕಾಸ ಕಾಟೇನಹಳ್ಳಿ, ಜ್ಯೋತಿ ಡಂಬಳ, ಸುಶೀಲಮ್ಮ ಯಲಿತಿಮ್ಮಣ್ಣನವರ, ಕರಬಸಪ್ಪ ಹರಿಯಾಳದ, ಸುನಂದಾ ಮಾಳೇನಹಳ್ಳಿ, ನಿರ್ಮಲ ಛತ್ರದ, ಲಕ್ಷಣಪ್ಪ ಸೊಟ್ಟೇರ, ಕನ್ನಪ್ಪ ಕೊಪ್ಪದ, ವೀರಬಸವ್ವ ಮೂಲಿಮನಿ, ಸುಮಾ ಸಂಕಣ್ಣನವರ, ಶೈಲಾ ಆಟದವರ, ಗಣೇಶ ಬೆನಕನಕೊಂಡ, ಮಹದೇವಕ್ಕ ಮಾಳೇನಹಳ್ಳಿ, ಮಹದೇವಪ್ಪ ಎಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net