ಕಾಯ್ದೆ ಅರಿತು ಸಮಸ್ಯೆ ಪರಿಹರಿಸಿಕೊಳ್ಳಿ

13-BYD KANUNU
Published on

ಬ್ಯಾಡಗಿ: ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆ ನೀಡುವಲ್ಲಿ ತಾಲೂಕು ಸಮಿತಿ ಕಾರ್ಯಪ್ರವೃತ್ತವಾಗಿದೆ. ಕಾಯ್ದೆಗಳು ಹಾಗೂ ತಮ್ಮ ಹಕ್ಕುಗಳ ಕುರಿತು ಜನರು ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಟಿ. ಸತೀಶ ಹೇಳಿದರು.
ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೋರೋಗ ತಜ್ಞ. ಡಾ. ವಿಜಯಕುಮಾರ ಬಳಿಗಾರ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಹತ್ತಾರು ಸಮಸ್ಯೆಗಳಿರುತ್ತವೆ. ಸೂಕ್ತ ಸ್ಪಂದನೆ, ಯಶಸ್ಸು, ಸಹಕಾರ, ಹೊಂದಾಣಿಕೆ ಕೊರತೆ ಇತ್ಯಾದಿಗಳು ಉದ್ಭವಿಸಿದಾಗ ಮಾನಸಿಕ ಸಮತೋಲನ ವ್ಯತ್ಯಾಸವಾಗುತ್ತದೆ. ಸಂದಿಗ್ಧ ವೇಳೆ ದುಡುಕಿನ ನಿರ್ಧಾರ ತೆಗೆದುಕೊಳ್ಳೀ ತಿಳಿವಳಿಕೆ ಪಡೆಯುವುದು ಅಗತ್ಯ. ಸಮಸ್ಯೆಗೆ ಪರಿಹಾರ ಮೂಲ ಕಂಡುಕೊಳ್ಳಬೇಕು. ಜೀನದಲ್ಲಿ ತೊಂದರೆಗಳು ಬರುವುದು, ಹೋಗುವುದು ಸಹಜ ಎಂದರು.
ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ಎಸ್.ಎನ್. ಬಾರ್ಕಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ, ಸರ್ಕಾರಿ ಸಹಾಯಕ ಅಭಿಯೋಜಕ ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ಎಂ. ಪ್ರಶಾಂತ, ಬಿ.ಜಿ. ಹಿರೇಮಠ, ಎಂ.ಪಿ. ಹಂಜಗಿ, ಎನ.ಬಿ. ಬಳಿಗಾರ, ಪಿ.ಆರ್. ಮಠದ, ವಿ.ಎಸ್. ಕಡಗಿ, ಬಿ.ಎಸ್. ಚೂರಿ, ಎಫ್.ಎಂ. ಮುಳಗುಂದ, ಎಂ.ಜೆ. ಮುಲ್ಲಾ, ಆರ್.ವಿ. ಬೆಳಕೇರಿಮಠ, ಪಿ.ಸಿ. ಸಿಗೀಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net