ಉಗ್ರಾಣದಲ್ಲಿ ಅಕ್ಕಿ ಇದ್ದರೂ ನೀಡದ ಕೇಂದ್ರ ಸರ್ಕಾರ

30-BYD -2 GRUHALAXMI
Published on

ಬ್ಯಾಡಗಿ: ಉಗ್ರಾಣದಲ್ಲಿ ಅಕ್ಕಿ ಕೊಳೆಯುತ್ತಿದ್ದರೂ ಬಡವರಿಗೆ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ನೀಡಲು ಹಿಂದೇಟು ಹಾಕುವ ಮೂಲಕ ಜನವಿರೋಧಿ ನೀತಿ ಅನುಸುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪಕ್ಷ ಆಡಳಿತಕ್ಕೆ ಬರಲು ಮಹಿಳೆಯರ ಶಕ್ತಿಯೇ ಕಾರಣವಾಗಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಈಗ ಗೃಹಲಕ್ಷ್ಮಿ ಜಾರಿಗೊಳಿಸುತ್ತಿದ್ದೇವೆ. ತಾಲೂಕಿನಲ್ಲಿ 32, 400 ಜನರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ತಹಸೀಲ್ದಾರ್ ಎಸ್.ವಿ. ಪ್ರಸಾದ, ಪುರಸಭೆ ಸದಸ್ಯರಾದ ಫಕೀರಮ್ಮ ಚಲವಾದಿ, ಜಮೀರಾಬಿ ಹರಕಲ್ಲ, ರೇಷ್ಮಾ ಶೇಖ್, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಸಿಡಿಪಿಒ ವೈ.ಟಿ. ಪೂಜಾರ, ಮುಖಂಡ ದಾನಪ್ಪ ಚೂರಿ, ಗಿರೀಶ ಇಂಡಿಮಠ, ಅಬ್ದುಲ್ ಮನಾಫಸಾಬ್ ಎಲಿಗಾರ, ರಾಮಣ್ಣ ಉಕ್ಕುಂದ, ದುರ್ಗೆಶ ಗೋಣೆಮ್ಮನವರ, ಬೀರಪ್ಪ ಬಣಕಾರ, ಚನ್ನಬಸಣ್ಣ ಹುಲ್ಲತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net