ಬ್ಯಾಡಗಿಯಲ್ಲಿ ರೈತರ ಪ್ರತಿಭಟನೆ

17-BYD-1 STRIKE
Published on

ಬ್ಯಾಡಗಿ: ಬೆಳೆವಿಮೆ ಹಣ ಬಿಡುಗಡೆ, ಬೆಳೆ ಹಾನಿ ಪರಿಹಾರ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸುವಂತೆ ಆಗ್ರಹಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಶನಿವಾರ 2 ತಾಸು ಪ್ರತಿಭಟನೆ ನಡೆಸಿದರು.

ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, 2022-23ನೇ ಸಾಲಿನ 65 ಕೋ.ರೂ ಬೆಳೆವಿಮೆ ಮೊತ್ತವನ್ನು ವಿಮಾ ಕಂಪನಿ ಬಾಕಿ ಉಳಿಸಿಕೊಂಡಿದೆ. ಈ ವರ್ಷದ ಬೆಳೆಹಾನಿ ಪರಿಶೀಲನೆ ಕೂಡ ಮಾಡುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿ ಹೊಲಗಳಿಗೆ ತೆರಳಿ ಪರಿಶೀಲಿಸದೇ ಕಚೇರಿಯಲ್ಲೇ ಕುಳಿತು ವರದಿ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಮನವಿ ಸ್ವೀಕರಿಸಿ ಮಾತನಾಡಿ, ಬೆಳೆವಿಮೆ ವಿಚಾರ ನಮ್ಮ ಹಂತದಲ್ಲಿಲ್ಲ, ವಿಮಾ ಕಂಪನಿ ಬಿಡುಗಡೆ ಮಾಡಬೇಕು. ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳ ತಂಡ ಬೆಳೆಹಾನಿ ಮಾಹಿತಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ನೀಡಲಿದೆ. ರೈತರು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗಂಗಣ್ಣ ಎಲಿ, ನಿಂಗಪ್ಪ ಮಾಸಣಗಿ, ರುದ್ರಗೌಡ್ರ ಕಾಡನಗೌಡ್ರ, ಮಲ್ಲೇಶಪ್ಲ ಡಂಬಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net