ಇನ್ಮುಂದೆ ಕಾಂಗ್ರೆಸ್‌ ನವರ ಹತ್ತಿರವೇ ಕೆಲಸ ಮಾಡಿಸಿಕೊಳ್ಳಲಿ!

Virupaksappa Ballary leaving counting center
Published on

ಹಾವೇರಿ: ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ವಿರುದ್ಧ 11 ಸಾವಿರ ಮತಗಳ ಅಂತರದಿಂದ ಹಿಂದೆ ಬಿದ್ದಿರುವ ವಿರುಪಾಕ್ಷಪ್ಪ ಬಳ್ಳಾರಿ ಅವರು ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದಾರೆ. ಒಂಭತ್ತನೇ ಸುತ್ತಿನಲ್ಲಿ ಭಾರಿ ಹಿನ್ನಡೆಯಾದ ಕಾರಣ ಕಾರು ಹತ್ತಿ ಮನೆಯತ್ತ ಹೊರಟ ವಿರುಪಾಕ್ಷಪ್ಪ ಬಳ್ಳಾರಿ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಳ್ಳಾರಿ ಅವರು, ಬಿಜೆಪಿ ಸರ್ಕಾರ ಜನರಿಗೆ ಒಳ್ಳೆಯ ಆಡಳಿತ ನೀಡಿದೆ. ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿಕೊಟ್ಟಿದೆ. ಆದರೆ, ಜನತೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ಇನ್ಮುಂದೆ ಅವರಿಂದಲೇ ಕೆಲಸ ಮಾಡಿಸಿಕೊಳ್ಳಲಿ. ಅವರ ಆಡಳಿತದಿಂದ ಬೇಸತ್ತು ಮತ್ತೇ ಮುಂದಿನ ಬಾರಿಗೆ ಬಿಜೆಪಿಯತ್ತ ಜನ ಬಂದೇ ಬರುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net