

ಹಳ್ಳೂರ: ಸಾಮೂಹಿಕ ಸತ್ಯ ನಾರಾಯಣ ಪೂಜೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಹೇಳಿದರು.
ಸಮೀಪದ ಖಾನಟ್ಟಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಪ್ರಗತಿ ಬಂಧು, ಮೂಡಲಗಿ ಗ್ರಾಮೀಣ ಸ್ವಸಹಾಯ ಸಂಘದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವದ್ಧಿ ಯೋಜನೆಯಿಂದ ಬಡವರ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವುದು.ಮಕ್ಕಳಿಗೆ ವಿದ್ಯಾರ್ಥಿವೇತನ, ಹಿರಿಯರಿಗೆ ಮಾಶಾಸನ, ವಾತ್ಸಲ್ಯ ಕಿಟ್ ಅನೇಕರಿಗೆ ಸಹಾಯ ಮಾಡಿದೆ ಎಂದರು.
ಶಿವಲಿಂಗೇಶ್ವರ ದೇವಸ್ಥಾನದ ಅರ್ಚಕ ಮಹಾಲಿಂಗಯ್ಯ ಪೂಜೇರಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಚೇತನ ರಡ್ಡೇರಟ್ಟಿ, ಮುಖಂಡರಾದ ಶಿವನಪ್ಪ ತುಪ್ಪದ, ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ, ವಲಯದ ಮೇಲ್ವಿಚಾರಕಿ ರೇಣುಕಾ ಭಟ್, ಸುನಂದಾ ಮೇನಸಪ್ಪಗೋಳ, ರಾಜು ಸೋನಾರ, ಶ್ರೀಶೈಲ ತುಪ್ಪದ, ಅಜ್ಜಪ್ಪ ಲಂಗೋಟಿ, ಮಹಾಂತೇಶ ರಡೇರಟ್ಟಿ, ಡಂಗಪ್ಪ ಲಂಗೋಟಿ, ಲಕ್ಷ್ಮೀ ಮದರಕಂಡಿ, ಶಂಕರ ಡೋಣಿ, ಶಿವಬಸು ತುಪ್ಪದ ಇತರರಿದ್ದರು.