ಗುರು ಕೃಪೆಯಿಂದ ಸರ್ವ ಕಾರ್ಯ ಸಿದ್ಧಿ

10blh3 netagud news
Published on

ಬೈಲಹೊಂಗಲ: ‘ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ’ ಎಂಬ ದಾಸವಾಣಿಯಂತೆ ಗುರುವಿನ ಮಾರ್ಗದರ್ಶನವಿಲ್ಲದೆ ನಮಗೆ ಯಾವುದೇ ಕಾರ್ಯಗಳು ಆಗದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಹೇಳಿದರು.

ಗುರು ಪೂರ್ಣಿಮೆಯ ನಿಮಿತ್ತ ಬಿಜೆಪಿ ಮಂಡಲದ ವತಿಯಿಂದ ಬೈಲಹೊಂಗಲದ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿಗಳಿಗೆ, ಬಳ್ಳಾರಿಯ ಮರಿಕೊಳ್ಳಮಠದ ಬಸವಸಿದ್ದ ಶ್ರೀಗಳಿಗೆ ಗೌರವ ಸಮರ್ಪಿಸಿ ಮಾತನಾಡಿ, ಹೆತ್ತ ತಾಯಿ, ಹೊತ್ತ ಭೂಮಿ, ಕಲಿಸಿದ ಗುರು ಈ ಮೂರು ವಿಷಯಗಳನ್ನು ಅರಿತು ನಡೆದರೆ ಮನುಷ್ಯ ಜನ್ಮ ಸಾರ್ಥಕ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಪುರಸಭೆ ಸದಸ್ಯ ಸಾಗರ ಬಾವಿಮನಿ, ತಾಲೂಕು ಮಾಧ್ಯಮ ಪ್ರಮುಖ ದಯಾನಂದ ಪರಾಳಶೆಟ್ಟರ, ಮುಖಂಡರಾದ ಸದಾಶಿವ ಪಾಟೀಲ, ಮಲ್ಲು ಬೆಳಗಾವಿ, ಸಿ. ಜಿ. ವಿಭೂತಿಮಠ, ಪರುಶುರಾಮ ರಾಯಭಾಗ ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net