ಅಧ್ಯಯನದಿಂದ ಭಾಷಾ ಪ್ರಭುತ್ವ ಸಾಧ್ಯ

1
ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.ಡಾ. ಎಂ.ಡಿ.ಕಮತಗಿ, ಪ್ರವೀಣಾ, ಡಾ.ಎ.ಬಿ.ವಗ್ಗರ, ಪ್ರೊ.ಎಸ್.ಜಿ.ಚಿಕ್ಕನರಗುಂದ, ಪರಶುರಾಮ ಮುಕಾರಿ ಇದ್ದರು.
Published on

ರಾಮದುರ್ಗ: ಭಾಷೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಬಸವರಾಜ ಕೊಡಗುಂಟಿ ಹೇಳಿದರು.

ಪಟ್ಟಣದ ಶ್ರೀಮತಿ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಐಕ್ಯೂಎಸಿ ಘಟಕ ಮತ್ತು ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಭಾಷಾ ವಿಜ್ಞಾನದ ಸಮಕಾಲೀನ ಬೆಳವಣಿಗೆಗಳು ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಳವಾದ ಅಧ್ಯಯನದಿಂದ ಭಾಷೆ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಿದೆ ಎಂದರು.

ಪ್ರಾಚಾರ್ಯ ಡಾ. ಎಂ.ಡಿ.ಕಮತಗಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ಪ್ರವೀಣಾ, ಡಾ.ಎ.ಬಿ.ವಗ್ಗರ, ಪ್ರೊ.ಎಸ್. ಜಿ. ಚಿಕ್ಕನರಗುಂದ, ಕನ್ನಡ ವಿಭಾಗದ ಮುಖ್ಯಸ್ಥ ಪರಶುರಾಮ ಮುಕಾರಿ, ಡಾ. ವೈ.ಎಸ್. ಹೊಸಮನಿ, ಎನ್.ಬಿ. ಕೊಪ್ಪದ, ಡಾ. ಪತ್ರೆಪ್ಪ ಸಿಂಗರಾಕೊಪ್ಪ ಇತರರಿದ್ದರು. ಲಕ್ಷ್ಮಣ ಬಂದಕ್ಕನ್ನವರ ಪ್ರಾರ್ಥಿಸಿದರು. ರುಕ್ಮಿಣಿ ಚನ್ನದಾಸರ ಸ್ವಾಗತಿಸಿದರು. ಡಾ.ರಾಜು ಕಂಬಾರ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮೀ ಅಳಗೋಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net