ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

2
ಬಸ್ ಸಮಸ್ಯೆ ಸರಿಪಡಿಸಲು ಒತ್ತಾಯಿಸಿ ದೊಡವಾಡದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಬುಧವಾರ ಬಸ್ ತಡೆದು ಪ್ರತಿಭಟಿಸಿದರು. ಶಿವರಂಜನ ನಾನನ್ನವರ, ಆನಂದ ಗಾಣಗಿ ಇತರರು ಇದ್ದರು.
Published on

ಬೈಲಹೊಂಗಲ: ತಾಲೂಕಿನ ದೊಡವಾಡ ಗ್ರಾಮದಿಂದ ಧಾರವಾಡ ಹಾಗೂ ಬೈಲಹೊಂಗಲ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಬಸ್ ಸಂಚಾರದ ಅನನುಕೂಲತೆ ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಬುಧವಾರ ಬಸ್ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡರಾದ ನಿಂಗಪ್ಪ ಚೌಡಣ್ಣವರ, ಸಂಗಯ್ಯ ದಾಭಿಮಠ, ಅಶೋಕ ಪರಂಡಿ, ಗಂಗಪ್ಪ ಸೊಬರದ ಮಾತನಾಡಿ, ಬೈಲಹೊಂಗಲ ಘಟಕದಿಂದ ದೊಡವಾಡ ಮಾರ್ಗವಾಗಿ ಧಾರವಾಡಕ್ಕೆ ನಿತ್ಯ ಸಂಚರಿಸಬೇಕಾದ ಬಸ್ ಸರಿಯಾಗಿ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಲಾಭದ ಉದ್ದೇಶದಿಂದ ಗರಗ ಮಾರ್ಗವಾಗಿ ಎಲ್ಲ ಬಸ್ ಸಂಚರಿಸುತ್ತಿವೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಘಟಕದ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಪ್ರಸಾದ ವಸದಮಠ, ಉಪ ವ್ಯವಸ್ಥಾಪಕ ಅಧಿಕಾರಿ ಬಿ.ಜಿ.ಪುಡಕಲಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ವಿದ್ಯಾರ್ಥಿ ಮುಖಂಡರಾದ ಶಿವರಂಜನ ನಾನನ್ನವರ, ಆನಂದ ಗಾಣಗಿ, ಸಂಗಮೇಶ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net