ಸತ್ಸಂಗದಿಂದ ಜೀವನ ಸಾರ್ಥಕ

16ITAGI2
Published on

ಇಟಗಿ: ಭಾರತವು ಅಧ್ಯಾತ್ಮದ ತವರು. ಆದ್ದರಿಂದ ನಾವು ನಮ್ಮ ಸಂಸತಿ ಹಾಗೂ ಭಗವಂತನ ಚಿಂತನೆಯತ್ತ ಗಮನಹರಿಸಬೇಕು ಎಂದು ಕಾದರವಳ್ಳಿ ಅದೃಶ್ಯಾನಂದ ಆಶ್ರಮ ಸೀಮಿಮಠದ ಪೀಠಾಧ್ಯ ಡಾ. ಪಾಲಾ ಶಿವಯೋಗೀಶ್ವರರು ಹೇಳಿದರು.

ಗ್ರಾಮದ ಕಮಲನಾರಾಯಣ ದೇವಸ್ಥಾನದಲ್ಲಿ 81ನೇ ದಿಂಡಿ ಮಹೋತ್ಸವದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಸಾರ್ಥಕ ಜೀವನ ನಡೆಸಲು ಸತ್ಸಂಗ ಅವಶ್ಯವಾಗಿದ್ದು, ಅದಕ್ಕಾಗಿ ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ದತ್ತವಾಡದ ಹಷಿಕೇಶಾನಂದ ಸ್ವಾಮೀಜಿ ಮಾತನಾಡಿದರು.ಪಾಂಡುರಂಗ ಸಂತರು, ವಿಠ್ಠಲ ಕರಡಿ, ಉದ್ಯಮಿ ನಾಮದೇವ ಜಾಧವ, ಸುರೇಶ ಕರಡಿ, ಅಶೋಕ ಶೀಲಿ, ದುಂಡಪ್ಪ ಬಲಗೊಂಡ, ವಿಠ್ಠಲ ನಿಲಜಕರ, ಮಲ್ಲಿಕಾರ್ಜುನ ಚಿಕ್ಕಮಠ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net