

ನಿಪ್ಪಾಣಿ: ಪ್ರಸ್ತುತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಪೈಪೋಟಿ ಮಧ್ಯೆಯೂ ಸಹಕಾರಿ ಸಂಘಗಳು ತಮ್ಮ ಅಸ್ತಿತ್ವ ಉಳಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿವೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಗುರುವಾರ ಚಿಕ್ಕೋಡಿಯ ಶ್ರೀ ಸಾಯಿ ಸೌಹಾರ್ದ ಸಹಕಾರಿ ಸಂಘದ 28ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸ ಹಾಗೂ ಪ್ರಾಮಾಣಿಕತೆ ತಳಹದಿಯ ಮೇಲೆ ಸಂಘ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಕಡಿಮೆ ಅವಧಿಯಲ್ಲಿ ಜಗದೀಶ ಕವಟಗಿಮಠ ಸಾರಥ್ಯದ ಸಾಯಿ ಸಹಕಾರಿ ಸಂಘ 28 ಶಾಖೆಗಳನ್ನು ಸ್ಥಾಪಿಸಿದೆ. ಸಂಘದ ಬೆಳವಣಿಗೆಗೆ ಕವಟಗಿಮಠ ಅವರ ಶ್ರಮ ಹಾಗೂ ಸಿಬ್ಬಂದಿ ಸಹಕಾರ ಪ್ರಮುಖವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಸಾಯಿ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಪ್ರತಿಯೊಬ್ಬರು ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂಬುದೆ ಸಂಘದ ಸದುದ್ದೇಶವಾಗಿದೆ. ಹೈನುಗಾರಿಕೆ ಸೇರಿ ವಿವಿಧ ಸ್ವಉದ್ಯೋಗಕ್ಕೆ ಆದ್ಯತೆ ನೀಡುತ್ತಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಎಸ್‌ಎಂ ಉಪ ಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಶ್ರೀ ಸಾಯಿ ಸಹಕಾರಿಯ ಉಪಾಧ್ಯಕ್ಷ ಷಡಕ್ಷರಿ ಮೂಗೇರಿ, ನಿರ್ದೇಶಕ ಸಂಜಯ ಗಿಡವೀರ, ಚಿದಾನಂದ ಹಿರೇಮಠ, ಹೇಮಂತ ಹಂಪನ್ನವರ, ರಾಘವೇಂದ್ರ ಡಂಬಳ, ರಾಜಕುಮಾರ ಹಿರೇಮಠ, ಸಂಜಯ ಶಿಂತ್ರೆ, ಅಕ್ಕೋಳ ಶಾಖೆ ಚೇರ್ಮನ್ ವಿನಾಯಕ ಸೋಳಾಂಕುರೆ, ಸುದರ್ಶನ ಸ್ವಾಮಿ, ಅಜಿತ ಹೊನಶೆಟ್ಟಿ, ರಾವಸಾಹೇಬ ಪುಣೆಕರ, ಸುಕುಮಾರ ಮಗದುಮ್, ಉತ್ತಮ ಸುತಾರ, ಯೋಗೇಶ ತಾವಡೆ, ಶಿವಪ್ಪ ಕರಡೆ, ರೂಪೇಶ ವಾರಕೆ, ಕಿಶೋರ ಸುತಾರ, ವಿನೋದ ಮೋಹಿತೆ, ವ್ಯವಸ್ಥಾಪಕ ಸಂಜಯ ಸುಗತೆ, ಶ್ರೀರಾಮ ಭಾರಮಲ ಇತರರಿದ್ದರು.