ಶಿವನಾಮಸ್ಮರಣೆಯಿಂದ ಜೀವನ ಪಾವನ

6HRBD1
ಅರಳಿಕಟ್ಟಿಯಲ್ಲಿ ಧರ್ಮಸಭೆ ಕಾರ್ಯಕ್ರಮವನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧ ರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು. ಶಿವಮೂರ್ತಿ ಸ್ವಾಮೀಜಿ, ಜಗದೀಶ ಶೆಟ್ಟರ್, ಪತ್ರಯ್ಯ ಹಿರೇಮಠ, ಚೇತನ ಅಂಗಡಿ ಇತರರಿದ್ದರು.
Published on

ಹಿರೇಬಾಗೇವಾಡಿ: ಶಿವನಾಮಸ್ಮರಣೆ ಮಾಡುವ ವ್ಯಕ್ತಿ ತಿಳಿಯದೇ ಮಾಡಿದ ಪಾಪ ಕರ್ಮ ಗಳನ್ನೆಲ್ಲ ಕಳೆದುಕೊಂಡು, ಪುಣ್ಯವಂತನಾಗಿ ಶಿವನ ಕಪೆಗೆ ಪಾತ್ರನಾಗುತ್ತಾನೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಸಮೀಪದ ಅರಳಿಕಟ್ಟಿ ಗ್ರಾಮಕ್ಕೆ ಸೋಮವಾರ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪುರಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಐದಕ್ಷರದ ಪಂಚಾಕ್ಷರಿ ಮಂತ್ರ ಜಪದಿಂದ ಎಲ್ಲ ವೇದ ರುದ್ರಾಧ್ಯಾಯ ಮತ್ತು 64 ವಿದ್ಯೆ ಅಧ್ಯಯನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಶಿವನಾಮಸ್ಮರಣೆಯಿಂದ ಜೀವನ ಪಾವನ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಈ ಎರಡು ನಾಣ್ಣುಡಿಗಳಿಂದ ದೇಶಕ್ಕೆ ಇಡೀ ಜಗತ್ತಿನಲ್ಲಿ ಗೌರವ ಲಭಿಸಿದೆ. ಆ ನಿಟ್ಟಿನಲ್ಲಿ ಭಾರತ ವಿಶ್ವಗುರು ಎನಿಸಿಕೊಳ್ಳಲಿದೆ. ಅದಕ್ಕೆ ಮೂಲ ಕಾರಣ ನಮ್ಮಲ್ಲಿರುವ ಧಾರ್ಮಿಕ ಚಿಂತನೆ, ಧರ್ಮದ ಜಾಗತಿ. ಆ ಕಾರಣಗಳಿಂದಲೇ ಶಾಂತಿ, ನೆಮ್ಮದಿ ನೆಲೆಸಿದೆ ಎಂದು ಹೇಳಿದರು. ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಶ್ರೀಶೈಲ ಜಗದ್ಗುರುಗಳು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಂಚೆ ಜಗದ್ಗುರುಗಳ ಭವ್ಯ ಸಾರೋಟ ಉತ್ಸವ, ಆರತಿ, ಕುಂಭಮೇಳ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ತೋಂಟದಾರ್ಯ ವಿರಕ್ತ ಮಠದಿಂದ ಮಹಾಲಕ್ಷ್ಮೀ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಮುಖಾಂತರ ಶ್ರೀಶೈಲ ಶಾಖಾ ಹಿರೇಮಠ ತಲುಪಿತು.

ಅರಳಿಕಟ್ಟಿ ತೋಂಟೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ, ಚೇತನ ಅಂಗಡಿ, ಪತ್ರಯ್ಯ ಹಿರೇಮಠ ಗುರುಗಳು, ನಿರಂಜನ ಶಾಸ್ತ್ರೀ, ಶಂಕ್ರಯ್ಯ ಶಾಸ್ತ್ರೀ, ಎಸ್.ಬಿ. ಕರಲಿಂಗನವರ, ಗ್ರಾಮಸ್ಥರು ಇದ್ದರು. ಎಸ್.ಬಿ. ಕರಲಿಂಗನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net