‘ಮೈ-ವೇದಿಕೆ ಮೈಸೂರು’ ವತಿಯಿಂದ ಜು.28 ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

Published on

ಮೈಸೂರು: ‘ಮೈ-ವೇದಿಕೆ ಮೈಸೂರು’ ವತಿಯಿಂದ ಜು.28 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವೇದಿಕೆ ಸಂಸ್ಥಾಪಕ ಮನೀಶ್‌ಗೌಡ ತಿಳಿಸಿದರು.
ಮುಕ್ತ ವಿವಿಯ ನಳ ಸಭಾಂಗಣದಲ್ಲಿ ಬೆಳಗ್ಗೆ ಆರಂಭವಾಗುವ ಸ್ಪರ್ಧೆಗೆ ರೋಟರಿ ಕ್ಲಬ್ ಮೈಸೂರು ಹಾಗೂ ಸಿಗ್ನೇಚರ್ ಡಾನ್ಸ್ ಕಂಪನಿ ಕೈಜೋಡಿಸಿವೆ. ನೃತ್ಯ, ಹಾಡುಗಾರಿಕೆ, ಭಾಷಣ, ಚಿತ್ರಕಲೆ, ಫ್ಯಾಶನ್ ಶೋ, ನಟನೆ ಹಾಗೂ ವಿಜ್ಞಾನ ಮಾದರಿಗಳ ಸ್ಪರ್ಧೆಗಳಿದ್ದು, ನಾಲ್ಕರಿಂದ 10ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧಿಸಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧೆಯಲ್ಲಿ ಮೂರು ವಿಭಾಗಗಳಿದ್ದು, ನಾಲ್ಕನೇ ಹಾಗೂ ಐದನೇ ತರಗತಿ ವಿದ್ಯಾರ್ಥಿಗಳು ಒಂದು ವಿಭಾಗವಾದರೆ, ಆರನೇ ತರಗತಿ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳು ಎರಡನೇ ವಿಭಾಗ, ಪ್ರೌಢಶಾಲೆ ಮಕ್ಕಳು ಮತ್ತೊಂದು ವಿಭಾಗದಲ್ಲಿ ಭಾಗವಹಿಸಬಹುದು. ಸ್ಪರ್ಧೆಗಳ ವಿಜೇತರಿಗೆ ಟ್ರೋಫಿ, ಮೆಡಲ್ಸ್ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್-5 ವಿನ್ನರ್ ರಾಹುಲ್ ಎಸ್.ರಾವ್ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಲಿದ್ದಾರೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪ್ರವೇಶ ಶುಲ್ಕವಾಗಿ 200 ರೂ. ಪಾವತಿಸಿದರೆ ಎಲ್ಲ ಆರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ ಪಾಲಕರು ಮಾಹಿತಿಗೆ ಮೊ.8549986439 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಆಯೋಜಕರಾದ ಶ್ರೀನಿವಾಸಗೌಡ, ರಾಜೇಂದ್ರ, ರಾಹುಲ್ ಎಸ್. ರಾವ್, ವಿನೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net