

ಅಥಣಿ ಗ್ರಾಮೀಣ: ಪ್ರತಿಯೊಬ್ಬರೂ ನಿತ್ಯ ಯೋಗ, ಧ್ಯಾನ ಹಾಗೂ ಸಂತ್ಸಗಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಶುದ್ಧಿಯಾಗಿ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಇಂಚಗೇರಿಯ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೊಜ್ಜನವಾಡಿಯ ಗಿರಿಮಲ್ಲ ಮಹಾರಾಜರು ಮಾತನಾಡಿ, ಮನುಷ್ಯನ ಮನಸ್ಸು ಅರಳಿಸುವ ಮಾತುಗಳೇ ಪ್ರವಚನ. ಸಂತರರು ಹಾಗೂ ಮಹಾತ್ಮರ ಜೀವನಾಧರಿತ ಹಿತ ನುಡಿಗಳನ್ನು ಆಲಿಸುವುದರಿಂದ ಶಾರೀರಿಕ ಆರೋಗ್ಯ ಹಾಗೂ ಸಂತೃಪ್ತಿ ದೊರೆಯುತ್ತದೆ ಎಂದರು.
ಸದಾಶಿವ ಮಹಾರಾಜರು ಮಾತನಾಡಿದರು. ಮಹಾದೇವಪ್ಪ ಕುಮಠಳ್ಳಿ, ಲಕ್ಷ್ಮಣ ತೇರದಾಳ, ಅಶೋಕ ಗಲಗಲಿ, ಶ್ರೀಶೈಲ ಗುಗವಾಡ, ಶಂಕರ ಚೌಗಲಾ, ಅಪ್ಪಾಸಾಹೇಬ ಸಾವಡಕರ, ಮಲ್ಲಪ್ಪ ನಂದೇಶ್ವರ, ನಿಂಗಪ್ಪ ತೇಲಿ, ಮಲ್ಲಪ್ಪ ಬಿರಾದಾರ, ಬಾಹುಸಾಹೇಬ ಮಾಂಗ, ಲಕ್ಕಪ್ಪ ಗುರಕಿ, ಪ್ರಕಾಶ ತೇಲಿ ಇತರರಿದ್ದರು.