

ರಾಯಬಾಗ: ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಂಡು ಸಹಬಾಳ್ವೆಯ ಜೀವನ ಮಾಡಬೇಕು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿ, ಇಲ್ಲಿ ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಶೀಘ್ರ ಬಗೆ ಹರಿಸಿಕೊಳ್ಳಬಹುದಾಗಿದೆ. ಇದರಿಂದ ಕಕ್ಷಿದಾರರಿಗೆ ಅನುಕೂಲವಾಗುವುದು. ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಿದರೆ ಸಮಾಜದಲ್ಲಿ ಸೌಹಾರ್ದತೆಯಿಂದ ಬದುಕಲು ಸಾಧ್ಯ ಎಂದರು.
ಲೋಕ ಅದಾಲತ್‌ನಲ್ಲಿ 2,156 ಪ್ರಕರಣಗಳು ಇತ್ಯರ್ಥಗೊಂಡವು. ವಕೀಲರಾದ ಎಲ್.ಬಿ.ಚೌಗುಲಾ, ಆರ್.ಎಚ್.ಗೊಂಡೆ, ಆರ್.ಎಲ್.ಅಸೋದೆ, ಎಸ್.ಎ.ಕೂಗೆ, ಎಲ್.ಎಚ್.ನಾಗರಮುನ್ನೊಳಿ, ಎಸ್.ಎಂ.ಕಳ್ಳೆ, ಎಂ.ಎಂ.ಕೋಠಿವಾಲೆ, ಬಿ.ಎಲ್.ಕೋಳಿಗುಡ್ಡ, ಪಿ.ಎಸ್.ಕುರಬೆಟ್ಟ, ಯು.ಎನ್.ಉಮ್ರಾಣಿ, ಎ.ಬಿ.ದಪ್ಪಾದುಳೆ, ರವಿ ಭಜಂತ್ರಿ ಇತರರು ಇದ್ದರು.