ಪುರಾಣ ಕೇಳುವುದರಿಂದ ಪುಣ್ಯ ಪ್ರಾಪ್ತಿ

MANGALOSTVA
Mangalostva meravanige
Published on

ಗಜೇಂದ್ರಗಡ: ಶ್ರಾವಣ ಮಾಸದಲ್ಲಿ ಶರಣರ, ದಾರ್ಶನಿಕರ ಕಥೆ, ಪುರಾಣ ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಕುದರಿಮೋತಿ- ಗಜೇಂದ್ರಗಡ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಶನಿವಾರ ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದಲ್ಲಿ ಒಂದು ತಿಂಗಳು ಆಯೋಜಿಸಿದ್ದ ಕಲಬುರಗಿ ಶರಣಬಸವೇಶ್ವರರ ಪುರಾಣ ಮಹಾಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಾತನಾಡಿ, ಶ್ರಾವಣ ಮಾಸವನ್ನು ಪಾವನ ಮಾಸ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಒಳ್ಳೆಯದನ್ನು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗಜೇಂದ್ರಗಡ ಭಾವೈಕಕ್ಕೆ ಹೆಸರಾಗಿರುವ ಪಟ್ಟಣವಾಗಿದೆ. ಇಲ್ಲಿನ ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮುದಾಯದ ಸಮುದಾಯ ಭವನ ಪೂರ್ಣಗೊಳಿಸಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಗಜೇಂದ್ರಗಡ- ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿದರು. ನಿಡಗುಂದಿಕೊಪ್ಪದ ಶಾಖಾ ಶಿವಯೋಗಿ ಮಂದಿರದ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಪುರಾಣ ಸಮಿತಿ ಅಧ್ಯಕ್ಷ ಶಿವುಕುಮಾರ ಕೋರಧಾನ್ಯಮಠ, ಅಶೋಕಕುಮಾರ ಬಾಗಮಾರ, ಎಸ್.ಎಸ್. ವಾಲಿ, ಅಮರೇಶ ಗಾಣಿಗೇರ, ಪ್ರಭು ಚವಡಿ, ಟಿ.ಎಸ್. ರಾಜೂರ, ಶರಣಪ್ಪ ರೇವಡಿ, ಬಸವರಾಜ ಚನ್ನಿ, ಬಸವರಾಜ ರೇವಡಿ, ಅಕ್ಷಯ ಬಂಡಿ, ಇತರರಿದ್ದರು.

ಬೆಳಗ್ಗೆ ಮೈಸೂರು ಮಠದಿಂದ ಸಕಲ ವಾದ್ಯ, ಮೇಳಗಳೊಂದಿಗೆ ಆರಂಭವಾದ ಶರಣಬಸವೇಶ್ವರರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರಳಿ ಮಠದ ಆವರಣ ತಲುಪಿತು. ಮೆರವಣಿಗೆಯಲ್ಲಿ 500ಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಹೊತ್ತು, ಆರತಿ ತಟ್ಟೆ ಹಿಡಿದು ಸಾಗಿದರು. ವೀರಗಾಸೆ, ಕಂಸಾಳೆ, ಡೊಳ್ಳು ಕುಣಿತ ಎಲ್ಲರ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net