

ಕುಮಟಾ: ಸಂಸ್ಕೃ ಭಾಷೆ ಕಲಿಯುವುದು ಮತ್ತು ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಂಸ್ಕಾರ, ಅದರಿಂದ ಸಂಸ್ಕೃ, ತನ್ಮೂಲಕ ಸನ್ನಡತೆಗಳು ನಮ್ಮ ಜೀವನದಲ್ಲಿ ಮೇಳೈಸುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ಹೆಗಡೆಯ ಡಾ. ರವೀಂದ್ರ ಕೃಷ್ಣ ಭಟ್ಟ ಸೂರಿ ಹೇಳಿದರು.
ತಾಲೂಕಿನ ಹೆಗಡೆಯ ಶ್ರೀ ಮಹಾಗಣಪತಿ ಸಂಸ್ಕೃ ಪಾಠಶಾಲೆಯಲ್ಲಿ ಕರ್ನಾಟಕ ಸಂಸ್ಕೃ ವಿಶ್ವವಿದ್ಯಾಲಯ, ಸಂಸ್ಕೃ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಸ್ಮಾಕಂ ಸಂಸ್ಕೃಮ್ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದ ಸಂಸ್ಕೃ ಅಕಾಡೆಮಿ ಅಧ್ಯಕ್ಷ, ವೇದ ವಿದ್ವಾನ್ ರಮೇಶ ವರ್ಧನ್ ಮಾತನಾಡಿ, ಉತ್ತಮ ಜೀವನಕ್ಕಾಗಿ ಸಂಸ್ಕೃ ಕಲಿಕೆ ಅನಿವಾರ್ಯ. ಸಂಸ್ಕೃತ ಕಲಿಕೆಗೆ ಪ್ರಾಶಸ್ಱವನ್ನು ಪಾಲಕರು ನೀಡಬೇಕು ಎಂದರು.
ಪಾಠಶಾಲೆ ಗೌರವ ಮುಖ್ಯಾಧ್ಯಾಪಕ ಡಾ. ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.