ಸಂಸ್ಕೃತ ಕಲಿಕೆಯಿಂದ ಜ್ಞಾಪಕ ಶಕ್ತಿ ವೃದ್ಧಿ

web4
ನೇಸರಗಿ ಸಮೀಪದ ಮಲ್ಲಾಪುರ ಕೆ.ಎನ್. ಗ್ರಾಮದಲ್ಲಿ ಮುಖ್ಯ ಶಿಕ್ಷಕ ಎಸ್.ಡಿ. ಕರಾಡೆ ಅವರನ್ನು ಚಿದಾನಂದ ಸ್ವಾಮೀಜಿ ಸನ್ಮಾನ ಮಾಡಿದರು. ಶರಣು ಎಂ.ಎಸ್., ಜಿ.ಬಿ.ಕರೆಪ್ಪನವರ, ಜಿ.ಬಿ. ಕರೆಪ್ಪನವರ ಇತರರಿದ್ದರು.
Published on

ನೇಸರಗಿ: ಸಂಸ್ಕೃತ ಪ್ರಾಚೀನ ಭಾಷೆಯಾಗಿದ್ದು, ದೇವರಿಗೆ ಪ್ರಿಯವಾಗಿದೆ ಎಂದು ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು ಹೇಳಿದರು.

ಸಮೀಪದ ಮಲ್ಲಾಪುರ ಕೆ.ಎನ್. ಗಾಳೇಶ್ವರ ಶಿಕ್ಷಣ ಸಂಸ್ಥೆಯ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಸಂಸ್ಕೃತ ಭಾರತಿ ಹಾಗೂ ಶಿವಯೋಗೀಶ್ವರ ಸಂಸ್ಕೃತ ಪಾಠ ಶಾಲೆ ಇಂಚಲ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಕೃತ ಕಲಿಕೆಯಿಂದ ಜ್ಞಾಪಕ ಶಕ್ತಿ ವದ್ಧಿಯಾಗುತ್ತದೆ ಎಂದರು. ಸಂಸ್ಕೃತ ಪರಿವೀಕ್ಷಕ ಜಿ.ಬಿ.ಕರೆಪ್ಪನವರ ಹಾಗೂ ಸಂಸ್ಕೃತ ಪಾಠಶಾಲೆ ಮುಖ್ಯೋಪಾಧ್ಯಾಯ ಎಸ್.ಡಿ.ಕರಾಡೆ ಮಾತನಾಡಿದರು. ಮುಖ್ಯಶಿಕ್ಷಕ ಶರಣು ಎಂ.ಎಸ್. ಪಾಠಶಾಲೆಯ ಸಿಬ್ಬಂದಿ ಹಾಗೂ ರೇವಣಸಿದ್ದೇಶ್ವರ ಶಾಲೆ ಶಿಕ್ಷಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net