

ಇಟಗಿ: ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದಾನ, ಧರ್ಮ ಮತ್ತು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಸಮೀಪದ ಚಿಕ್ಕಹಟ್ಟಿಹೊಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಲ ದೀಪೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನ ಅಪಾರ ಭಕ್ತರನ್ನು ಹೊಂದಿದ ಜಾಗತ ಸ್ಥಳವಾಗಿದ್ದು, ಕ್ಷೇತ್ರದ ಅಭಿವದ್ಧಿಗೆ ಎಲ್ಲ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಭದ್ರೇಶ್ವರ ದೇವಸ್ಥಾನ ಅತ್ಯಂತ ಧಾರ್ಮಿಕ ಹಾಗೂ ಆಧ್ಯಾತ್ಮಿಕ ೇತ್ರವನ್ನಾಗಿಸಲು ವಿಪುಲ ಅವಕಾಶಗಳಿದ್ದು, ಎಲ್ಲರೂ ಕೈಜೋಡಿಸಬೇಕು ಎಂದರು. ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯಾಧ್ಯ ಹಾಗೂ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸಮಾಜ ಸೇವೆಗೆ ಗುರುವಿನ ಆಶೀರ್ವಾದ ಹಾಗೂ ದೆವಿಶಕ್ತಿ ಅವಶ್ಯವಾಗಿದೆ. ಜನಸೇವೆಗೆ ಅವಕಾಶ ಸಿಕ್ಕಿದ್ದು ಸುದೆವ. ದೇವಸ್ಥಾನದ ಜೀಣೋರ್ದ್ಧಾರಕ್ಕೆ ಅವಶ್ಯ ಅನುದಾನವನ್ನು ಅತಿ ಶ್ರೀದಲ್ಲಿ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ ಎಂದರು.
ರುದ್ರಾಭಿಷೇಕ, ಮಹಾಪೂಜೆ, ಮಹಾಪ್ರಸಾದ, ಲ ದೀಪೋತ್ಸವ ವಿಜಂಭಣೆಯಿಂದ ನಡೆಯಿತು. ಸಾಗರ ಸಣ್ಣಕ್ಕಿ ಮಾತನಾಡಿದರು. ದೊಡವಾಡ ಜಡಿಸಿದ್ದೇಶ್ವರ ಸ್ವಾಮೀಜಿ, ಮುತ್ನಾಳ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಚಿಕ್ಕಹಟ್ಟಿಹೊಳಿ ಚಂಬಯ್ಯ ಸ್ವಾಮೀಜಿ, ದುಂಡಯ್ಯ ಸ್ವಾಮೀಜಿ, ಟ್ರಸ್ಟ್ ಗೌರವಾಧ್ಯ ಎಸ್.ಎಸ್.ಕಿವಡಸಣ್ಣವರ, ಅಧ್ಯ ಗಿರಿಗೌಡ ಪಾಟೀಲ, ಉಪಾಧ್ಯ ಶ್ರೀಶೆಲ ಪೂಜಾರ, ಕಾರ್ಯದರ್ಶಿ ವಿನಯ ಪೂಜಾರ, ಶಿಕ ವಿವೇಕ ಕುರಗುಂದ, ಕಾರ್ಯದರ್ಶಿ ವಿನಯ ಪೂಜಾರ, ಕಮಿಟಿ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇತರರಿದ್ದರು.