

ನಂದೇಶ್ವರ: ಪುಣ್ಯ ಕ್ಷೇತ್ರ ನಂದೇಶ್ವರ ಗ್ರಾಮದ ಸಿದ್ದಿ ಪುರುಷ ಗಡಾಮ ಮುತ್ಯಾನ ಮಹಿಮೆ ಅಪಾರ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಗ್ರಾಮದಲ್ಲಿ ಗಡಾಮ ಮುತ್ಯಾನ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೋಪಕಾರಿಯಾಗಿ ಬದುಕಿದರೆ ಮಾತ್ರ ಶಾಶ್ವತವಾಗಿ ಉಳಿಯಲು ಸಾಧ್ಯ. ಬದುಕಿರುವಾಗಲೇ ಉತ್ತಮ ಕಾರ್ಯ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು ಎಂದರು.
ಜಮಖಂಡಿ ಓಲೆಮಠದ ಆನಂದ ದೇವರು ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯ ಸಂಪತ್ತು ಕಾಪಾಡಿಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಉನ್ನತಿಯತ್ತ ಎಲ್ಲರೂ ಗಮನ ಹರಿಸಬೇಕು. ಗಡಾಮ ಮುತ್ಯಾನ ಹಾಗೆ ಸದಾ ಜೀವಂತವಾಗಿ ಬದುಕಲು ಇಚ್ಛಿಸಬೇಕೆಂದು ಹೇಳಿದರು.
ಜಕನೂರಿನ ಮುಪ್ಪಯ್ಯ ಹಿರೇಮಠ ಮಾತನಾಡಿದರು. ಸಮಾಜ ಸೇವಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಪರಶುರಾಮ ಮಹಾರಾಜರು, ಗಡಾಮ ಮುತ್ಯಾ ದೇವಸ್ಥಾನದ ಅರ್ಚಕ ಬಸಪ್ಪ ಚಂಡಕಿ, ವಿರೂಪಾಕ್ಷ ಹಿರೇಮಠ, ಬನಹಟ್ಟಿಯ ರಾಜುಗೌಡ ಪಾಟೀಲ, ರಾಮಣ್ಣ ದೇವನ್ನವರ, ಗುರುಲಿಂಗ ತೇಲಿ, ಅದೃಶ ಪಾಟೀಲ, ಹನುಮಂತ ಹಳಿಂಗಳಿ, ಬಸಪ್ಪ ಬಿರಡಿ, ಡಾ.ಸುಭಾಸ ಚಂಡಕಿ, ಧರೆಪ್ಪ ಮಗದುಮ್ಮ, ಪಿ.ಬಿ.ಜನವಾಡ, ಮಹಾಂತೇಶ ಚಂಡಕಿ, ಕಾಡಪ್ಪ ತೇಲಿ, ಸಿದ್ದಪ್ಪ ಬಳವಾಡ, ಸಿದ್ದಲಿಂಗ ಚಂಡಿಕಿ ಇತರರಿದ್ದರು. ಎಸ್.ಬಿ.ಲಾಲಸಿಂಗಿ ನಿರೂಪಿಸಿದರು. ಶಿವಾನಂದ ಪಾಟೀಲ ಸ್ವಾಗತಿಸಿದರು. ರಾಮು ಚಂಡಕಿ ವಂದಿಸಿದರು.