ಉಪಚುನಾವಣೆ ಮತದಾನ ಬಹಿಷ್ಕಾರ

26 SVR 2
Published on

ಸವಣೂರ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಟ್ಟಣದ ದಂಡಿನಪೇಟೆಯ ಪರಡಿ ನಂ. 28/1ರ ನಿವಾಸಿಗಳು ಉಪ ಚುನಾವಣೆ ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿದ್ದಾರೆ.

ಮತದಾನ ಬಹಿಷ್ಕರಿಸಿರುವ ಕುರಿತು ಬ್ಯಾನರ್ ಅಳವಡಿಸಿರುವ ಮಾಹಿತಿ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಭರತರಾಜ್ ಕೆ.ಎನ್.. ಹಾಗೂ ಅಧಿಕಾರಿಗಳು ಆಗಮಿಸಿ, ನಿವಾಸಿಗಳ ಬೇಡಿಕೆ ಈಡೇರಿಸುವ ಭರವಸೆ ನೀಡಲು ಮುಂದಾದರು. ಇದರಿಂದ ನಿವಾಸಿಗಳು ಆಕ್ರೋಶಗೊಂಡರು.

ಸಾಮಾಜಿಕ ಕಾರ್ಯಕರ್ತ ಸಂದೀಪ ಬಾಬನಿ ಮಾತನಾಡಿ, ಪರಡಿ ನಂ. 28/1ರ 4 ಎಕರೆ 28 ಗುಂಟೆ ಜಮೀನನ ಡ ಉತ್ತಾರದಲ್ಲಿ ಹೆಸರು ಇಲ್ಲದಿದ್ದರೂ ಕಂದಾಯ ಇಲಾಖೆಯ ಸುಳ್ಳು ಆರ್​ಟಿಸಿ ನೀಡಿದೆ. ಇದರಿಂದ ಸುಮಾರು 60 ವರ್ಷಗಳಿಂದ ವಾಸಿಸುತ್ತಿರುವ 44 ಕುಟುಂಬಗಳ ಮನೆ ತೆರವಿಗೆ ಲಾಲಶಾಕಟ್ಟೆ ಮಸೀದಿ ಕಮಿಟಿ ದುಂಬಾಲು ಬಿದ್ದಿದೆ. ಇದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಉಳುವವನೇ ಭೂಮಿ ಒಡೆಯ ಯೋಜನೆಯಡಿ ದಲಿತ ವ್ಯಕ್ತಿಗೆ ಬಂದಿದ್ದ ಕೃಷಿಭೂಮಿಯನ್ನು ಅಕ್ರಮವಾಗಿ ಮಸೀದಿ ಕಮಿಟಿಗೆ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು. ಬಡ ಕುಟುಂಬಸ್ಥರಿಗೆ ನ್ಯಾಯ ಒದಗಿಸುವಂತೆ 30 ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಸಂಬಂಧಪಟ್ಟ ಇಲಾಖೆಗಳಿಗೆ ನಿರಂತರವಾಗಿ ಮನವಿ ಸಲ್ಲಿಸಿದರೂ ನ್ಯಾಯ ದೊರಕಿಲ್ಲ. ಆದ್ದರಿಂದ, ಉಪ ಚುನಾವಣೆ ಮತದಾನ ಬಹಿಷ್ಕರಿಸಲಾಗಿದೆ. ಬೇಡಿಕೆ ಈಡೇರಿಸಿದಲ್ಲಿ ಮಾತ್ರ ಮತದಾನ ಮಾಡಲು ತೀರ್ವನಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಪಿಎಸ್​ಐ ಮೇಘರಾಜ ದೊಡ್ಡಮನಿ, ಕೃಷ್ಣ ರಾಥೋಡ, ಸ್ಥಳೀಯ ನಿವಾಸಿಗಳಾದ ಜೀಲಾನಿ ಬಂಕಾಪುರ, ಹೆಗ್ಗಪ್ಪ ಕಲಾಲ, ಆನಂದ ಕರ್ನಲ, ಈರಣ್ಣ ತೆಗ್ಗಿಹಳ್ಳಿ, ರತ್ನವ್ವ ಛಲವಾದಿ, ನಿರ್ಮಲಾ ಬಂಕಾಪುರ, ಗೌಸ್​ವೋದಿನ ಮಕಾನದಾರ, ಮಹಮ್ಮದಹನೀಫ ಜವಳಿ, ಮೋದಿನಸಾಬ್ ನಾರಲಬೋಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net