

ಸವಣೂರ: ಸವಣೂರ-ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ರಾಷ್ಟ್ರೀಯ ಪಕ್ಷಗಳ ಟಿಕೆಟ್ಗಾಗಿ ಕೆಲವರು ದುಂಬಾಲು ಬಿದ್ದಿದ್ದಾರೆ. ಬಿಜೆಪಿಯಲ್ಲಿ ತೆರೆಮರೆಯ ಕಸರತ್ತು ನಡೆದಿದ್ದರೆ, ಕಾಂಗ್ರೆಸ್ನಲ್ಲಿ ಬಹಿರಂಗವಾಗಿ ಕೆಲವರು ಬಲಾಬಲ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ. ಕೆಲವರು ಕ್ಷೇತ್ರದ ಪ್ರಮುಖ ಬೀದಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿ ಈಗಾಗಲೇ ಪ್ರಬಲ ಆಂಕಾಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಆಸೆ, ಆಮಿಷಗಳೊಂದಿಗೆ ಭರವಸೆ ನೀಡುತ್ತಿದ್ದಾರೆ.
ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿಗಳು ಎಂದು ಹೇಳಿಕೊಳ್ಳುತ್ತಿರುವವರಲ್ಲಿ ಸೈಯ್ಯದ್ ಅಜೀಮ್ೕರ್ ಖಾದ್ರಿ, ರಾಜು ಕುನ್ನೂರ, ಹನುಮಂತ ಬಂಡಿವಡ್ಡರ ಪ್ರಮುಖರಾಗಿದ್ದು, ಸ್ಥಳೀಯರಾಗಿದ್ದಾರೆ. ಮಾಜಿ ಸಚಿವ ಆರ್. ಶಂಕರ, ಸುಭಾನಿ ಚುಡಿಗಾರ, ಯಾಸೀರಖಾನ್ ಪಠಾಣ, ರಾಜೇಶ್ವರಿ ಪಾಟೀಲ, ರಜತ ಉಳಾಗಡ್ಡಿಮಠ, ಸಿ.ಎಂ. ಫೈಝå್ ಇಬ್ರಾಹಿಂ, ಎಸ್.ಬಿ. ಪಾಟೀಲ, ಸಂಜೀವಕುಮಾರ ನೀರಲಗಿ ಹೊರಗಿನವರು. ಇವರಲ್ಲಿ ಸೈಯ್ಯದ್ ಅಜೀಮ್ೕರ್ ಖಾದ್ರಿ ಹಾಗೂ ಯಾಸೀರಖಾನ್ ಪಠಾಣ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಹೈಕಮಾಂಡ್ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ರಾಜು ಕುನ್ನೂರ, ಹನುಮಂತ ಬಂಡಿವಡ್ಡರ, ರಾಜೇಶ್ವರಿ ಪಾಟೀಲ ಇತರರು ಹೈಕಮಾಂಡ್ಗೆ ಮನವಿ ಸಲ್ಲಿಸಿ, ಮಾಧ್ಯಮ ಮೂಲಕ ಒತ್ತಾಯಿಸುತ್ತಿದ್ದಾರೆ.
ಸಿ.ಎಂ. ಫೈಝå್ ಇಬ್ರಾಹಿಂ, ಮಾಜಿ ಸಚಿವ ಆರ್. ಶಂಕರ, ಸುಭಾನಿ ಚುಡಿಗಾರ ಸೇರಿದಂತೆ ಹಲವರು ಪಟ್ಟಣ, ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿ ತಾವು ಆಕಾಂಕ್ಷಿಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಮಾಜಿ ಸಚಿವ ಆರ್. ಶಂಕರ, ಮತದಾರರನ್ನು ಸೆಳೆಯಲು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ತೆರಳಿ ತಮ್ಮ ಭಾವಚಿತ್ರ ಹೊಂದಿರುವ ಸ್ಕೂಲ್ ಬ್ಯಾಗ್ಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕಿಯರಿಗೆ ವ್ಯಾನಿಟಿ ಬ್ಯಾಗ್ ವಿತರಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಬ್ಯಾಗ್ ವಿತರಣೆಗಾಗಿ ಉಪ ಚುನಾವಣೆ ಅಭ್ಯರ್ಥಿ ಎಂಬುವವರು ಯಾವುದೇ ರೀತಿಯ ಪರವಾನಗಿ ಪಡೆದಿಲ್ಲ. ಈ ಕುರಿತು ಮೇಲಧಿಕಾರಿಗಳ ಆದೇಶ ಇರುವುದಿಲ್ಲ. ಶಾಲಾ ಹಂತದಲ್ಲಿ ಪರಿಶೀಲನೆ ಕೈಗೊಂಡು ಸೂಕ್ತ ತನಿಖೆ ಕೈಗೊಳ್ಳಲಾಗುವುದು. | ಎಂ.ಎಫ್. ರ್ಬಾ, ಶಿಕ್ಷಣ ಇಲಾಖೆ ಸವಣೂರ ಪಟ್ಟಣದ ರಾಜ್ಯ ಹೆದ್ದಾರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಅಳವಡಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್ಗಳಿಗೆ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಮೇಲಧಿಕಾರಿಗಳ ಆದೇಶದ ಮೇರಿಗೆ ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಫಕೀರೇಶ ಬೂದಿಹಾಳ, ಹಿರಿಯ ಆರೋಗ್ಯ ನಿರೀಕ್ಷಕ ಪುರಸಭೆ ಸವಣೂರ