

ತಾಳಿಕೋಟೆ: ರಾಜ್ಯದ ಮೂರೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಬೇರಿ ಭಾರಿಸಿದ್ದರಿಂದ ಪಟ್ಟಣದಲ್ಲಿ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಪುರಸಭಾ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಮನ್ಸೂರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 18 ತಿಂಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದರು.
ಅಖಿಲ ಭಾರತ ಮಜ್ದೂರು ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಂಗನಗೌಡ ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಿದ್ದನಗೌಡ ಪಾಟೀಲ (ನಾವದಗಿ), ಅನೀಲ ಕಲಾಲ, ಲತೀಪ ಬೀಳಗಿ, ಸಂಗಮೇಶ ದೇಸಾಯಿ, ಜುಮ್ಮಣ್ಣ ನಾಲತವಾಡ, ಮಹಿಬೂಬ ಕೆಂಭಾವಿ, ಸದ್ದಾಮ್ ಹೊನ್ನಳ್ಳಿ, ಆಸೀ ಕೆಂಭಾವಿ, ಗೋಪಾಲ ಕಟ್ಟಿಮನಿ, ಖಾಜಾಪಟೇಲ, ಖಲೀಲ ಜಮಾದಾರ ಇತರರಿದ್ದರು.