ವಿದ್ಯೆಯಿಂದ ಮಾತ್ರ ಸಾಧನೆ ಸಾಧ್ಯ

2
ತಲ್ಲೂರ ಗ್ರಾಮದ ಶ್ರೀ ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ವಿಕ್ರಮಕುಮಾರ ದೇಸಾಯಿ, ಬಸಪ್ಪ ಭೋವಿ, ಅನಿರುದ್ಧ ದೇಸಾಯಿ, ಮಹಾರುದ್ರಪ್ಪ ಉಪ್ಪಿನ, ಸಿ.ವಿ.ಮಾಸ್ತಮರಡಿ ಇತರರಿದ್ದರು.
Published on

ತಲ್ಲೂರ: ನಮ್ಮ ಬಳಿ ವಿದ್ಯೆ ಇದ್ದರೆ ಏನಾದರೂ ಸಾಧನೆ ಮಾಡಬಹುದು ಎಂದು ಶ್ರೀ ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆ ಅಧ್ಯಕ್ಷ ವಿಕ್ರಮಕುಮಾರ ದೇಸಾಯಿ ಹೇಳಿದರು.

ಗ್ರಾಮದ ಶ್ರೀ ಬಸವೇಶ್ವರ ಯುವಕ ಮಂಡಳ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಕಾಗ್ರತೆ ರೂಢಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದರು.

ಯುವಕ ಮಂಡಳ ಉಪಾಧ್ಯಕ್ಷ ಬಸಪ್ಪ ಭೋವಿ ಮಾತನಾಡಿ, ಕೇವಲ ಶಿಕ್ಷಣ ಕಲಿಸಿದರೆ ಗುರುವಾಗುವುದಿಲ್ಲ. ಶಿಕ್ಷಣದ ಜತೆಗೆ ಸಂಸ್ಕಾರವನ್ನು ತಂದೆ-ತಾಯಿಯ ಸ್ವರೂಪದಲ್ಲಿ ನಿಂತು ಬಿತ್ತುವಂತಹ ಕಾರ್ಯ ಮಾಡಬೇಕು ಎಂದರು.

ಮದ್ಲೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಲ್.ಎ್.ಕಂಕನವಾಡಿ, ಅನಿರುದ್ಧ ದೇಸಾಯಿ, ಪಿಕೆಪಿಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಎಸ್.ಆರ್.ಬೆನಕಟ್ಟಿ, ಸಿ.ವಿ.ಮಾಸ್ತಮರಡಿ, ಫಕೀರಪ್ಪ ಬಡಿಗೇರ, ಮಲ್ಲಿಕಾರ್ಜುನ ಗಾಣಿಗೇರ, ಬಸಪ್ರಭು ಮಲಕನ್ನವರ, ಪಂಚಪ್ಪ ದುಂಡನಕೊಪ್ಪ, ಮಹಾಂತೇಶ ಮರಿಗೌಡರ, ಲತಾ ತಲ್ಲೂರ, ಬಿ.ಸಿ.ಕರಿಕಟ್ಟಿ, ಆರ್.ಪಿ.ದುಂಡನಕೊಪ್ಪ, ಎಸ್.ಎಫ್.ಬಡಿಗೇರ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೆಟ್ಟಿ, ಎಸ್.ಎಂ.ಸಾಲಿ, ಎ.ಎಚ್.ಕುದರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net