ಸಹಕಾರದಿಂದ ಸಂಘಗಳು ಪ್ರಗತಿ

2
ಕಾರದಗಾ ಗ್ರಾಮದಲ್ಲಿ ಶ್ರೀ ಪ್ರಜ್ಞಾ ಕ್ರೆಡಿಟ್ ಸೌಹಾರ್ದ ಸಹಕಾರಿಯ ದ್ವಿತೀಯ ಶಾಖೆಯನ್ನು ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಅದಗೌಡ ಪಾಟೀಲ, ರಾಯಗೌಡ ಪಾಟೀಲ, ಬಾಬಾಸಾಹೇಬ ನೋರಜೆ, ಬಾಬಾಸಾಹೇಬ ಧರಣಗುತ್ತೆ, ಮಲ್ಲಾಪ್ಪ ಭಾಗಾಜೆ, ರಾಜು ಖೀಚಡೆ, ಪದ್ಮಜಾ ಅಲಂಕಾರ ಇದ್ದಾರೆ.
Published on

ಬೋರಗಾಂವ: ಸದಸ್ಯರು, ಠೇವುದಾರರು ಹಾಗೂ ಸಾಲಗಾರ ಸಹಕಾರದಿಂದ ಸಹಕಾರಿ ಸಂಘಗಳು ಪ್ರಗತಿ ಹೊಂದುತ್ತವೆ ಎಂದು ಕೊಲ್ಲಾಪುರ ಜೈನ ಮಠದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಕಾರದಗಾ ಗ್ರಾಮದಲ್ಲಿ ಗುರುವಾರ ಶ್ರೀ ಪ್ರಜ್ಞಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಎರಡನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಅದಗೌಡ ಪಾಟೀಲ ಮಾತನಾಡಿ, ಸಹಕಾರಿಯ ಸಮಾಜಮುಖಿ ಕಾರ್ಯ ಮಾಡಿ ಜನಸಾಮಾನ್ಯರ ಹಿತ ಕಾಪಾಡುತ್ತಿದೆ. ಸಂಘದ ಬೆಳವಣಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಉಪಾಧ್ಯಕ್ಷ ರಾಯಗೌಡ ಪಾಟೀಲ, ಬಾಬಾಸಾಹೇಬ ನೋರಜೆ, ಬಾಬಾಸಾಹೇಬ ಧರಣಗುತ್ತೆ, ಮಲ್ಲಪ್ಪ ಭಾಗಾಜೆ, ರಾಜು ಖೀಚಡೆ, ಗ್ರಾಪಂ ಅಧ್ಯಕ್ಷೆ ಪದ್ಮಜಾ ಅಲಂಕಾರ, ಉಪಾಧ್ಯಕ್ಷ ಕಿರಣ ಟಾಕಳೆ, ನಿತೇಶ ಖೋತ, ಜಯೋತಿರಾಂ ಅಲಂಕಾರ ಇತರರಿದ್ದರು. ಸಮ್ಮೇದ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net