ಪರಮಾತ್ಮನ ನಾಮಸ್ಮರಣೆಯಿಂದ ಪುಣ್ಯ ಪ್ರಾಪ್ತಿ

5nsg1
Published on

ನೇಸರಗಿ: ಭಕ್ತಿ ಹಾಗೂ ಶ್ರದ್ಧೆಯಿಂದ ಪರಮಾತ್ಮನ ನಾಮಸ್ಮರಣೆ ಮಾಡುವುದರಿಂದ ಮಾಡಿದ ಪಾಪಗಳೆಲ್ಲವೂ ಹೋಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಇಂಚಲ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಸಮೀಪದ ಮುರ್ಕಿಭಾವಿ ಗ್ರಾಮದಲ್ಲಿ ಶುಕ್ರವಾರ ಸಿದ್ಧಾರೂಢರ ಜಾತ್ರಾ ಮಹೋತ್ಸವದ 37ನೇ ವೇದಾಂತ್​ ಪರಿಷತನಲ್ಲಿ ನಿಜಗುಣಿ ಶಿವಯೋಗಿಗಳ ಗ್ರಂಥದ ಸಾಲು "ಪಾರಮಾರ್ಥ ಗೀತಾ' ಎಂಬ ವಿಷಯದ ಕುರಿತು ಅವರು ಪ್ರವಚನ ನೀಡಿದರು.

ಪರಮಾತ್ಮನು ಕೊಟ್ಟಂತಹ ನಾಲಿಗೆಯಿಂದ ಶಿವ ಶಿವ ಎಂದು ಜಪ ಮಾಡುವುದರಿಂದ ಗುರುವಿನ ನಾಮಸ್ಮರಣೆಯಿಂದ ಪರಿಶುದ್ಧರಾಗುತ್ತೀರಿ ಎಂದರು. ಈ ಜನ್ಮದಲ್ಲಿ ಯಾರು ಪುಣ್ಯ ಮಾಡಿರುತ್ತಾರೋ ಅವರು ಮುಂದಿನ ಜನ್ಮದಲ್ಲಿ ಶ್ರೀಮಂತರಾಗಿ ಹುಟ್ಟುತ್ತಾರೆ. ಭಗವಂತನನ್ನು ಒಲಿಸಿಕೊಳ್ಳಲು ಯಾವ ಜಾತಿ, ಧರ್ಮ ಬೇಕಿಲ್ಲ ಎಂದರು.

ಪೂರ್ಣಾನಂದ ಸ್ವಾಮೀಜಿ ಮಾತನಾಡಿ, ಪರಮಾತ್ಮನ ನಾಮಸ್ಮರಣೆ ಮಾಡುವುದರಿಂದ ನಮ್ಮ ಪಾಪವು ಸುಟ್ಟು ಭಸ್ಮ ಆಗುತ್ತದೆ ಎಂದರು.

ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹರಳಿಕಟ್ಟಿಯ ರೇವಣಸಿದ್ಧೇಶ್ವರ ಸ್ವಾಮೀಜಿ, ಬಸವಾನಂದ ಭಾರತಿ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಶಿವದೇವಿ ತಾಯಿ, ನೀಲಮ್ಮ ತಾಯಿ, ಶಿವಾನಂದ ಸ್ವಾಮೀಜಿ, ಶಿವಾನಂದ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net