

ಮುರಗೋಡ: ಶಿವಚಿದಂಬರೇಶ್ವರರು ಲೋಕಕಲ್ಯಾಣಕ್ಕಾಗಿ ಅವತರಿಸಿದ್ದಾರೆ. ಭಗವಂತನ ನಾಮಸ್ಮರಣೆಯಿಂದ ಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ಮುರಗೋಡದ ಕೆಂಗೇರಿ ಚಿದಂಬರೇಶ್ವರ ಮಠದ ಪೀಠಾಧಿಕಾರಿ ದಿವಾಕರ ದೀತ ಸ್ವಾಮೀಜಿ ಹೇಳಿದರು. ವಿವಿಧೆಡೆಯಿಂದ ಮಂಗಳವಾರ ಆಗಮಿಸಿದ 50ನೇ ವರ್ಷದ ದಿಂಡಿ ಪಾದಯಾತ್ರೆ ಪಲ್ಲಕ್ಕಿ ಉತ್ಸವದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಕ್ತರು ಚಿದಂಬರ ಸ್ವಾಮಿಯ ದರ್ಶನ ಪಡೆದರು. ಪಾಂಡುರಂಗ ದೀತ ಸ್ವಾಮೀಜಿ, ಪ್ರಭಾಕರ ದೀತ ಸ್ವಾಮೀಜಿ, ಗುಂಡೂರಾವ ಕುಲಕರ್ಣಿ, ಚಿದಂಬರ ತೂರಗಲ್ಲ, ರಮೇಶ ದೇಶಪಾಂಡೆ, ಸಂಜೀವ ಗೂಂಬಿ, ಬಾಲಾಜಿ ಕುಲಕರ್ಣಿ, ಪ್ರಶಾಂತ ಭಟ್ಟ ಹಾವನೂರು, ಹುಲ್ಲೆಪ್ಪ ರಗಟಿ, ಸುಧಾಕರ ಹಂಪಿಹೂಳಿ ಇದ್ದರು.