

ಮುದಗಲ್: ಪ್ರತಿಯೊಬ್ಬರೂ ಶ್ರದ್ಧಾ ಭಕ್ತಿಯಿಂದ ಭಜನೆ, ಸತ್ಸಂಗ ಹಾಗೂ ದೇವರನಾಮ ಸ್ಮರಣೆ ಮಾಡಿದರೆ ನೆಮ್ಮದಿ ಕಾಣಬಹುದು ಎಂದು ಸಾಲಿಮಠದ ಸಿದ್ದಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಸಾಲಿಮಠದಲ್ಲಿ ಏರ್ಪಡಿಸಿದ್ದ ಶ್ರೀ ಶಾಂಭವಿ ದೇವಿ ಮಹಾತ್ಮೆ ಪುರಾಣೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಯುವಪೀಳಿಗೆಯಲ್ಲಿ ಭಕ್ತಿ, ಶ್ರದ್ಧೆ ಮಾಯವಾಗಿದೆ. ಧರ್ಮ ಜಾಗೃತಿ ಆಗಬೇಕಾದರೆ ಪುರಾಣ, ಪ್ರವಚನ ಹಾಗೂ ಸಾಧು ಸಂತರ ನುಡಿಸೇವೆಗಳಿಂದ ಮಾತ್ರ ಸಾಧ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ನಂತರ ಮುದಗಲ್‌ನ ಸಹಜ ಸ್ಥಿತಿ ಯೋಗ ಪ್ರತಿಷ್ಠಾನದಿಂದ ಎರಡು ಗಂಟೆಗಳ ಕಾಲ ಸತ್ಸಂಗದ ವಿಶೇಷ ಭಜನೆ ಮತ್ತು ದೇವನಾಮ ಸ್ಮರಣೆ ಕಾರ್ಯಕ್ರಮ ಜರುಗಿತು. ಪ್ರಮುಖರಾದ ಸಂಗಪ್ಪ ಕೊಡೆಕಲ್, ಶರಣಪ್ಪ ಸಜ್ಜನ್, ಗಂಗಾಧರ ಮಡಿವಾಳರ, ಹನುಮಂತ ಉಪ್ಪಾರ, ಮಂಜುನಾಥ, ಹನುಮಂತ ಭಜಂತ್ರಿ, ಕಿರಣ್ ಡಿ.ಜೆ, ರೆಹಮಾನ್ ಸಾಬ್ ಇತರರಿದ್ದರು.