ಕಾಲುವೆಯಿಂದ 4,500 ಎಕರೆ ನೀರಾವರಿ

4
ಹಾಲಳ್ಳಿ ಗ್ರಾಮದಲ್ಲಿ ಕಾಲುವೆ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ಮಠಪತಿ, ಎಸ್.ಬಿ.ಬಾಗಿ, ಸಿದ್ದುಬಾ ಲಾಂಡಗೆ, ಭರತೇಶ ಮಹೇಶವಾಡಗಿ ಇತರರಿದ್ದರು.
Published on

ಅರಟಾಳ: ರೈತ ನೆಮ್ಮದಿಯಿಂದಿದ್ದರೆ. ದೇಶ ಸುಖವಾಗಿರುತ್ತದೆ. ಅನ್ನ ಕೊಡುವ ರೈತ ಕಷ್ಟದಲ್ಲಿ ಇರಬಾರದು ಎಂಬ ಉದ್ದೇಶದಿಂದ ಕೊಟ್ಟಲಗಿ ಅಮಾಜೇಶ್ವರಿ ಏತ ನೀರಾವರಿ ಯೋಜನೆ ಮೂಲಕ ಶಾಸ್ವತ ನೀರಾವರಿ ಕಲ್ಪಿಸಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಹಾಲಳ್ಳಿ ಗ್ರಾಮದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಅರಟಾಳ-ಹಾಲಳ್ಳಿ-ತೆಲಸಂಗ ಕಾಲುವೆಗಳಿಗೆ ಈಚೆಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಕಾಲುವೆ ಮಂಜೂರಾತಿಗೆ 12.20 ಕೋಟಿ ರೂ. ಸರ್ಕಾರ ಅನುಮೋದನೆ ನೀಡಿದ್ದು, ಕಾಮಗಾರಿ ಆರಂಭವಾಗಲಿದೆ. 4,500 ಎಕರೆ ಭೂಮಿ ಇದರ ಲಾಭ ಪಡೆಯಲಿದೆ ಎಂದರು.

ಮಲ್ಲಿಕಾರ್ಜುನ ಮಠಪತಿ, ಅಥಣಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಬಾಗಿ, ಸಿದ್ದುಬಾ ಲಾಂಡಗೆ, ಭರತೇಶ ಮಹೇಶವಾಡಗಿ, ಮುರಗೇಶ ಬಮನಾಳೆ, ಬೆನ್.ಸಿ.ಪವಾರ, ಗುಳಪ್ಪ ಗೌಡಪ್ಪನವರ, ಕಳಸಪ್ಪ ಹೊನಗೌಡ, ಅಮೋಘ ಖೋಬ್ರಿ, ಶ್ರೀಶೈಲ ಶೆಲ್ಲೇಪಗೋಳ, ಈಶ್ವರಲಿಂಗ ಕಲಘಟಗಿ, ಶಿವಾನಂದ ಹೊನಗೌಡ, ಶಿವಾನಂದ ಪಾಟೀಲ, ಮಲ್ಲಪ್ಪ ಪೂಜಾರಿ, ಸದಾಶಿವ ಹೊನಗೌಡ, ಶಿದರಾಯ ಜಮಖಂಡಿ, ನಿಂಗಪ್ಪ ಹಿಪ್ಪರಗಿ, ಶಿವಲಿಂಗ ಬೇವನೂರ, ರಮೇಶ ಜಾಧವ, ಶಿವಲಿಂಗ ಹೊನಗೌಡ, ಮಹೇಶ ದೇಸಾಯಿ, ಆನಂದ ಕಿರಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net