ಪರೋಪಕಾರದಿಂದ ಜನ್ಮ ಸಾರ್ಥಕ

18Handigund1
Published on

ಹಂದಿಗುಂದ: ದಾನ, ಧರ್ಮ ಹಾಗೂ ಪರೋಪಕಾರ ಮಾಡಿದರೆ ಮಾನವ ಜನ್ಮವು ಸಾರ್ಥಕವಾಗುವುದು. ಜತೆಗೆ ನೆಮ್ಮದಿ ಸಿಗುತ್ತದೆ ಎಂದು ನಿರ್ವಾನಟ್ಟಿ ಶಿವಾನಂದ ಮಠದ ಪೀಠಾಧಿಪತಿ ವಿದ್ಯಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಕಟಕಬಾವಿ ಗ್ರಾಮದ ಪಿಡಾಯಿ ತೋಟದ ಆರಾಧ್ಯ ದೇವತೆ ಜಕ್ಕಮ್ಮದೇವಿ ಹಾಗೂ ಧರಿದೇವರ 6ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ವೇದಾಂತ ಪರಿಷತ್ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಎರಡನೇ ದಿನದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಣ್ಯಾಶ್ರಮದ ಪೀಠಾಧಿಪತಿ ಅಭಿನವ ಧರೇಶ್ವರ ಸ್ವಾಮೀಜಿ ವೇದಾಂತ ಪರಿಷತ್ ಪ್ರವಚನಕ್ಕೆ ಚಾಲನೆ ನೀಡಿದರು. ಅವರಿಗೆ ಭಕ್ತರಿಂದ ಬೆಳ್ಳಿ ಕಿರೀಟಧಾರಣೆ ಮಾಡಲಾಯಿತು. ಅನ್ನ ಸಂತರ್ಪಣೆ ನೆರವೇರಿತು.

ಧೂಪದಾಳದ ಸಿದ್ಧಾರೂಢ ಮಠದ ಪೀಠಾಧಿಪತಿ ಭೀಮಾನಂದ ಸ್ವಾಮೀಜಿ, ಇಟನಾಳ ಸಿದ್ಧೇಶ್ವರ ಶರಣರು, ಕಂಕಣವಾಡಿ ಮಾರುತಿ ಶರಣರು, ದೂಪದಾಳದ ಕಲಾವತಿ ಅಮ್ಮ, ಗೋಕಾಕ ಮಾತೋಶ್ರೀ ಸುವರ್ಣ ತಾಯಿ ಹೊಸಮಠ, ಶಿವಾನಂದ ಮಠಪತಿ, ಅಜಿತ ಪಿಡಾಯಿ, ರೇವಪ್ಪ ಪಿಡಾಯಿ, ಧರೆಪ್ಪ ಪಿಡಾಯಿ, ಸಿದ್ದಪ್ಪ ಲೋಕೋರೆ, ಕೆಂಪಣ್ಣ ನಾವಿ, ನಿಂಗಪ್ಪ ಪಿಡಾಯಿ, ಮುದುಕಪ್ಪ ಪಿಡಾಯಿ, ಲಕ್ಷ್ಮಣ ಪಿಡಾಯಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪಕಾಂಡಿ, ಹನುಮಂತ ಪಿಡಾಯಿ, ಅಪ್ಪಾಸಿ ಪಿಡಾಯಿ, ನಿಂಗಪ್ಪ ಮಾಂಗ, ಮುದಕಪ್ಪ ಪಕಾಂಡಿ ಇತರರು ಇದ್ದರು.18-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net