

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ 38ನೇ ಶಾಲಾ ಸಂಸ್ಥಾಪನಾ ದಿನಾಚರಣೆಯ ಜರುಗಿತು.
ಶಾಲೆಯ ನಿರ್ದೇಶಕ ವಿನಾಯಕ ಆರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಮೌಲ್ಯಗಳ ಕುರಿತು ವಿದ್ಯಾಥಿರ್ಗಳಿಗೆ ತಿಳಿ ಹೇಳಿದರು. ಪ್ರತಿ ವರ್ಷ ಬಿವಿವಿಯಲ್ಲಿ ಹೊಸದೊಂದು ವಿಚಾರವನ್ನು ಅನುಷ್ಠಾನಗೊಳಿಸಲಾಗುತ್ತದೆ. ಅದೇ ರೀತಿ ವಿದ್ಯಾಥಿರ್ಗಳು ಕೂಡ ತಮ್ಮ ಜೀವನದಲ್ಲಿ ತಾವು ಪ್ರತಿದಿನವು ಹಿಂದಿನ ದಿನಕ್ಕಿಂತ ಉತ್ತಮರಾಗಲು ಯೋಚಿಸಬೇಕೆಂದು ಹೇಳಿದರು.
ಅಲ್ಲಾಭ ನೀಲಿ ಮಾತನಾಡಿ, ಇಂತಹ ಒಳ್ಳೆಯ ಕಾರ್ಯಕ್ರಮದಲ್ಲಿ ತಮ್ಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನ ನೀಡಿದಕ್ಕೆ ಆಡಳಿತ ಮಂಡಳಿಯವರಿಗೆ ಕೃತತೆ ಸಲ್ಲಿಸುವುದಾಗಿ ಹೇಳಿದರು.
ಎಂ. ಆರ್ ಪಾಟೀಲ್, ಹುಸೇನ ನವಲಗುಂದ, ಅಲ್ಲಾಭ ನೀಲಿ, ಜೀಷಾನ್ ಗುಳಗುಂದಿ ಅವರಿಗೆ ಬಿವಿವಿ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಎಂ. ಆರ್ ಪಾಟೀಲ್, ಎಸ್. ರವಿ, ಮಲ್ಲಿಕಾ ಆರ್, ಗಂಗಾ, ಆರ್ ವಿನಾಯಕ್, ವಿ. ಎಂ. ಅಡ್ನೂರ್, ಪಿ. ಜಿ. ಬ್ಯಾಳಿ ಹಲವರು ಇದ್ದರು.