ಬೆಂಬಲ ಬೆಲೆಗೆ ಈರುಳ್ಳಿ ಖರೀದಿಸಿ

Buy onions at support price
Published on

ಹುನಗುಂದ : ತಾಲೂಕಿನಲ್ಲಿ ರೈತರು ಬೆಳೆದ ಈರುಳ್ಳಿ ಬೆಳೆಯನ್ನು ಬೆಂಬಲ ಬೆಲೆಗೆ ಸರ್ಕಾರ ಕೂಡಲೇ ಖರೀದಿಸಬೇಕು ಎಂದು ಆಗ್ರಹಿಸಿ ರೈತರು ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿದ ರೈತರು ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಮುಖಂಡ ಮಹಾಂತೇಶ ನಾಡಗೌಡರ, ಬಿ.ಎಸ್. ಬಡ್ಡಿ ಮಾತನಾಡಿ, ತಾಲೂಕಿನ ರೈತರು ಸಾಲಮಾಡಿ ಈರುಳ್ಳಿ ಬೆಳೆ ಬಿತ್ತನೆ ಮಾಡಿ ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಬಿಟ್ಟುಬಿಡದೆ ಸುರಿದ ಭಾರಿ ಮಳೆಗೆ ಸಂಪೂರ್ಣ ಈರುಳ್ಳಿ ಬೆಳೆ ನಾಶವಾಗಿದೆ. ಉಳಿದಿರುವ ಅಲ್ಪ ಬೆಳೆಯಾದರೂ ರೈತರಿಗೆ ಸಿಕ್ಕೀತು ಎಂದರೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿದು ಮತ್ತಷ್ಟು ಸಂಕಷ್ಟ ಎದುರಾಗಿದೆ. ಇದರಿಂದ ಒಂದು ಎಕರೆ ಈರುಳ್ಳಿಗೆ ರೈತರು ಮಾಡಿರುವ ಖರ್ಚಿನ ಹಣವೂ ಬರದಂತಾಗಿದೆ. ತಕ್ಷಣ ಸರ್ಕಾರ ಪ್ರತಿ ಎಕರೆಗೆ 60 ಕ್ವಿಂಟಲ್ ಈರುಳ್ಳಿಯನ್ನು ಬೆಂಬಲ ಬೆಲೆಗೆ ಖರೀದಿಸಬೇಕು. ಬೆಳೆ ಪರಿಹಾರ ಧನ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಶ್ರೀಕೃಷ್ಣ ಜಾಲಿಹಾಳ, ಶಶಿಕಾಂತ ತಿಮ್ಮಾಪೂರ, ಸಂಗಮೇಶ ಆನೇಹೊಸೂರ, ಮಹಾಂತೇಶ ಹಳಪೇಟಿ, ಬಸಪ್ಪ ಜಗ್ಲ, ರೆಹಮಾನಸಾಬ್ ಮುಲ್ಲಾ, ನೀಲಪ್ಪ ವಾಲಿಕಾರ, ಸಂಗಪ್ಪ ಚಿಕ್ಕೋಡಿ, ಮುದಕಪ್ಪ ಬೇನಾಳ, ಗಿರಮಲಪ್ಪ ಹಳಪೇಟಿ, ಮಹಾಂತೇಶ ವಾಲಿಕಾರ, ಪ್ರಕಾಶ ಹೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net