ಖರೀದಿಗಿಂತ ಹೆಚ್ಚು ಮರಳು ಸಾಗಣೆ:4 ಲಾರಿಗಳ ಮೇಲೆ ಹರಪನಹಳ್ಳಿ ಎಸಿ ನೇತೃತ್ವದಲ್ಲಿ ದಾಳಿ

110920 Hadagali Illigal Lorries Attack
ಹೂವಿನಹಡಗಲಿ ಹೊರವಲಯದಲ್ಲಿ 4 ಲಾರಿಗಳ ಮೇಲೆ ಹರಪನಹಳ್ಳಿ ಎಸಿ ಪ್ರಸನ್ನಕುಮಾರ ನೇತೃತ್ವದ ತಂಡ ದಾಳಿ ಮಾಡಿತ್ತು.
Published on

ಹೂವಿನಹಡಗಲಿ: ತಾಲೂಕಿನ ಮರಳು ಸ್ಟಾಕ್‌ಯಾರ್ಡ್‌ಗಳಿಂದ ಖರೀದಿಸಿಗಿಂತ ಹೆಚ್ಚುವರಿ ಮರಳು ಸಾಗಿಸುತ್ತಿದ್ದ ನಾಲ್ಕು ಲಾರಿಗಳ ಮೇಲೆ ಹರಪನಹಳ್ಳಿ ಸಹಾಯಕ ಆಯುಕ್ತ ಪ್ರಸನ್ನಕುಮಾರ ನೇತೃತ್ವದ ತಂಡ ಶುಕ್ರವಾರ ದಾಳಿ ಮಾಡಿ, ದಂಡ ಹಾಕಿತು.

ಪುರ ಮತ್ತು ಹಕ್ಕಂಡಿ ಸ್ಟಾಕ್‌ಯಾರ್ಡ್‌ಗಳಿಂದ ಪಾಸ್ ಪಡೆದವರು ನಾಲ್ಕು ಲಾರಿಗಳಲ್ಲಿ ಖರೀದಿಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಾಗಿಸುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಸಿ ನೇತೃತ್ವದ ತಂಡ ಬಸಾಪುರ ಬಳಿ ದಾಳಿ ನಡೆಸಿದೆ. 4 ಲಾರಿಗಳು ಕಡ್ಡಾಯವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮರಳು ಸಾಗಣೆ ಪರವಾನಗಿ ಪಡೆದಿದ್ದಾರೆ. ಆದರೆ, ಹೆಚ್ಚುವರಿ ಮರಳನ್ನು ಲಾರಿಯಲ್ಲಿ ತುಂಬಿ ಸಾಗಿಸುತ್ತಿದ್ದರು. ಹೀಗಾಗಿ ಎಸಿ ಪ್ರಸನ್ನಕುಮಾರ ದಾಳಿ ಮಾಡಿ 4 ಲಾರಿಗಳಿಗೆ ಕಾನೂನು ಪ್ರಕಾರ ದಂಡ ಹಾಕಿದ್ದಾರೆ. ಮೊದಲ ಬಾರಿ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಲಾಗಿದೆ.

ಇದು ಪುನರಾವರ್ತನೆಯಾದರೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ವೇಳೆ ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಕಂದಾಯ ನಿರೀಕ್ಷಕರು, ವಿಎಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net